Рет қаралды 146,700
ಪಟ್ಲ ಸತೀಶ್ ಶೆಟ್ಟಿ ಜಾಗತಿಕ ಮಟ್ಟದಲ್ಲಿ ಸಾವಿರಾರು ಅಭಿಮಾನಿ ಬಳಗ ಹೊಂದಿರುವ ವ್ಯಕ್ತಿ. ಯಕ್ಷಗಾನದಲ್ಲಿ ತಮ್ಮ ಕಂಠಸಿರಿಯಿಂದ ಪ್ರಖ್ಯಾತವಾಗಿರುವ ಭಾಗವತರು. ತನ್ನ ಜೊತೆಗೆ ಕಲಾವಿದರ ಯೋಗಕ್ಷೇಮದ ಹಿತಾಸಕ್ತಿಯಿಂದ ಪಟ್ಲ ಫೌಂಡೇಶನ್ಸ್ ಸ್ಥಾಪಿಸಿ, ಹಲವು ಕಲಾವಿದರ ಜೀವನದ ದಿಕ್ಕು ಬದಲಿಸಿದ ಭಾಗವತ. ಕಲಾಸಕ್ತಿ ಜೊತೆಗೆ ಕಲಾವಿದರ ಹಿತರಕ್ಷಣೆ ನನ್ನ ಹೊಣೆ ಎಂದು ಸದಾ ಕಲಾವಿದರ ಪರ ನಿಂತುಕೋಳ್ಳುತ್ತಿದ್ದ ಕರಾವಳಿಯ ರಾಜಕುಮಾರ ಎಂದು ಜನ ಇವರನ್ನು ಇಷ್ಟ ಪಡುತ್ತಿದ್ದರು. ಪಟ್ಲರ ಭಾಗವತಿಕೆ ಇದೆ ಎಂದರೆ ಸಾವಿರಸಾವಿರ ಅಭಿಮಾನಿಗಳು ಇವರ ಹಾಡು ಕೇಳಲು ಸುತ್ತ ಹತ್ತು ಹಳ್ಳಿಗಳಿಂದ ಬರುತ್ತಾರೆ. ಆದರೆ ಇಂತಹ ಬಹುಬೇಡಿಕೆಯ ಕಲಾವಿದನನ್ನು ರಂಗಸ್ಥಳದಿಂದ ಎಬ್ಬಿಸಿ ಭಾಗವತರನ್ನು ಹೋರಗೆ ಅಟ್ಟಿದ ಕಟೀಲು ಮೇಳದ ಯಜಮಾನರ ವಿರುದ್ಧ ಇದೀಗ ಕರಾವಳಿಯ ಜನ ಕೆಂಡಾಮಂಡಲವಾಗಿದ್ದಾರೆ.
#ಯಕ್ಷಗಾನ #ಭಾಗವತ #ಪಟ್ಲಸತೀಶ್ #ಕಟೀಲು #ಕರಾವಳಿ #ಕಲೆ #ಭಕ್ತಿ #ಅಭಿಮಾನಿಬಳಗ #ಕಟೀಲುಮೇಳ #ಸುದ್ದಿ #ಡೆಮಾಕ್ರಟಿಕ್ #ನೈಜವಿದ್ಯಮಾನ #ವಿಶ್ಲೇಷಣೆ #democratictv #tv #news #democraticnews #programs #Yakshagana #Bhagavata #kateelmela #kateel #patlasarhish