Рет қаралды 33,382
ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ. ಜಗತ್ತಿನ ಜೀವನಶೈಲಿ, ಕಾಲಕ್ಕೆ ತಕ್ಕಂತೆ ಕ್ರಿಕೆಟ್ ಕೂಡ ತನ್ನ formatನ್ನು ಬದಲಾಯಿಸಿಕೊಳ್ಳುತ್ತ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಟೆಸ್ಟ್, ಏಕದಿನಗಳ ದೀರ್ಘ ಇನ್ನಿಂಗ್ಸ್ ಟ್ವೆಂಟಿ-ಟ್ವೆಂಟಿಯ ಚುಟುಕು ಕ್ರಿಕೆಟ್ಟಾಗಿ ಹುಚ್ಚು ಹೊಳೆ ಹರಿಸುತ್ತಿದೆ. ಹೀಗೆ ಕ್ರಿಕೆಟ್‌ನ ಬದಲಾವಣೆಯ ಗಾಳಿ ದಿಲ್ಲಿಯಿಂದ ಗಲ್ಲಿ ಕ್ರಿಕೆಟ್ಟನ್ನೂ ತಾಕದೆ ಬಿಟ್ಟಿಲ್ಲ. ಟೆನಿಸ್ ಬಾಲ್, ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಪವರ್ ಫುಲ್ ಆಟಗಾರ ಸಾಲಿಗ್ರಾಮದ ರಾಜ. ಟೆನಿಸ್ ಬಾಲ್ ಕ್ರಿಕೇಟ್ನ ರಾಜನಾಗಿ ಮೆರೆಯುತ್ತಿರುವ ರಾಜ ಸಾಲಿಗ್ರಾಮ ಹುಟ್ಟಿದ್ದು ಸಾಲಿಗ್ರಾಮದಲ್ಲಿ. ರಾಮದಾಸ್ ಹಾಗೂ ಬೇಬಿ ದಂಪತಿಗಳ ಸುಪುತ್ರನಾಗಿ ಬೆಳೆದ ರಾಜನಿಗೆ ಬಾಲ್ಯದಿಂದಲೇ ಕ್ರಿಕೇಟ್ ಬಗ್ಗೆ ಆಸಕ್ತಿ. ಈ ಆಸಕ್ತಿಗೆ ನೀರೆರೆದು ಪೋಷಿಸಿದ್ದು ಪಾರಂಪಳ್ಳಿ ಕ್ರಿಕೇಟರ್ಸ್. ಬಳಿಕ ಚಕ್ರವರ್ತಿ ಕುಂದಾಪುರದ ಯುವರಾಜ ನಾಗಿಚಮೆರೆದ ರಾಜ. AK= ಸ್ಪೋರ್ಟ್ಸ್ ಉಡುಪಿಯಲ್ಲೂ ತಮ್ಮ ಪ್ರಾಬಲ್ಯ ಮೆರೆದರು. Johnson ಹಂಗಳೂರು ನಾಯಕ ನಾಗಿ,ಚುಕ್ಕಾಣಿ ಹಿಡಿದು ರಾಜ್ಯದಲ್ಲಿ ಹೆಸರು ಮಾಡಿದ ರಾಜ ಮತ್ತೆ ಹಿಂದೆ ಕಂಡಿಲ್ಲ, ಜಿಲ್ಲೆ, ರಾಜ್ಯ, ದೇಶ, ವಿದೇಶದಲ್ಲೂ ಕ್ರಿಕೆಟ್ ನ ಕಂಪನ್ನು ಪಸರಿಸಿದರು. ಕುವೈಟ್,ಕತಾರ್,ದುಬೈ, ಶಾರ್ಜ್, ಮಸ್ಕತ್ ಅಬುದಭಿ ಸೌದಿ ದೇಶಗಳಲ್ಲಿ ಮನೆಮಾತಾದರು. ಹಾರ್ಡ್ ಟೆನ್ನಿಸ್ ದಿಗ್ಗಜರು ಆದ ಕೃಷ್ಣ ಸತ್ಪೂಟೆ,ಓಂಕಾರ್ ದೇಸಾಯಿ,ಉಸ್ಮಾನ್ ಪಟೇಲ್,ಜೊತೆಗೆ ಆಡಿ ಪಳಗಿದರು. ಕ್ರಿಕೇಟ್ನಲ್ಲಿ 2 ಬಾರಿ ಬೈಕ್ ಹಾಗೂ 100 ಕ್ಕೂ ಮಿಕ್ಕಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಸಾಧನೆ ರಾಜ ಅವರಿದ್ದು. ಇಂತಹ ಪ್ರತಿಭಾನ್ವಿತ ಆಟಗಾರನ ಜೊತೆ ಇಂದಿನ ಚಿಟ್ಚಾಟ್ 30 ವಿತ್ ಕಮೆಂಟ್ರಿ ಶಿವ.