No video

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ | Farmer turned 45 acres of wasteland into a lush green | Uv

  Рет қаралды 1,486

Udayavani

Udayavani

Ай бұрын

#Udayavani #agriculture #agriculturefarming #farmar
Agriculture ಹಡಿಲು ಭೂಮಿಗೆ ಜೀವ ತುಂಬುವ ರೈತ
2 ದಶಕದಿಂದ ಹಡಿಲು ಗದ್ದೆಗಳಲ್ಲಿ ಕೃಷಿ ಮಾಡುವ ಗಂಗಾಧರ ಪೂಜಾರಿ
ಕುಂದಾಪುರ: ಇಲ್ಲೊಬ್ಬ ಅಪರೂಪದ ಕೃಷಿಕ ತನ್ನ ಮಾದರಿ ಕಾರ್ಯದ ಮೂಲಕ ಎಕ್ರೆಗಟ್ಟಲೆ ಹಡಿಲು ಭೂಮಿಯನ್ನು ಹಸನು ಮಾಡುತ್ತಿದ್ದಾರೆ. ಊರಲ್ಲಿ ಹಡಿಲು ಬೀಳುವ ಗದ್ದೆಗಳನ್ನು ಗೇಣಿಗೆ ಪಡೆದು ಬೇಸಾಯ ಮಾಡುವುದೇ ಇವರ ಕಾಯಕ. 20 ವರ್ಷಗಳಿಂದ ನಿರಂತರವಾಗಿ ಈ ಕಾರ್ಯವನ್ನು ಬದ್ಧತೆಯಿಂದ ಮಾಡುತ್ತಿದ್ದಾರೆ. ಕುಂದಾಪುರ ಕೋಡಿಯ ಗಂಗಾಧರ ಪೂಜಾರಿ ಅವರೇ ಮಾದರಿ ಕೃಷಿಕ.
ಇವರು ತನ್ನ ಒಂದು ಎಕ್ರೆ ಗದ್ದೆಯೊಂದಿಗೆ ಕೋಡಿಯ ಶ್ರೀ ಚಕ್ರೇಶ್ವರಿ ದೇವಸ್ಥಾನದ ಆಸುಪಾಸಿನಲ್ಲಿ ರೈತರು ಹಡಿಲು ಬಿಡುವ ಗದ್ದೆಗಳನ್ನು ಹುಡುಕಿ, ಅವುಗಳಲ್ಲಿ ಬೇಸಾಯ ಮಾಡುತ್ತಿದ್ದಾರೆ. ಈ ವರ್ಷ ಒಟ್ಟಾರೆ 45 ಎಕ್ರೆ ಗದ್ದೆಗಳಲ್ಲಿ ನಾಟಿ ಕಾರ್ಯ ಕೈಗೊಂಡಿದ್ದಾರೆ. ಈ ಬಾರಿ ಸೋನ್ಸ್‌ ಶಾಲೆ ಹತ್ತಿರ ಹೆಚ್ಚುವರಿಯಾಗಿ 15
ಇಡೀ ಕುಟುಂಬ ಜತೆಗಿದೆ
ಗಂಗಾಧರ ಪೂಜಾರಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್‌ ಹಾಗೂ ಡೆಕೊರೇಶನ್‌ ಕೆಲಸ ಮಾಡುತ್ತಿದ್ದು, ಅವರಿಗೆ ಕೃಷಿಯಲ್ಲಿ ಅಪಾರ ಆಸಕ್ತಿಯಿದೆ. ತಂದೆಯಿಂದ ಬಳುವಳಿಯಾಗಿ ಬಂದ ಕೃಷಿ ಕಾಯಕವನ್ನು ಎಂದಿಗೂ ಬಿಡಲಾರೆ ಎನ್ನುವ ಅವರಿಗೆ ಈ ಕಾರ್ಯದಲ್ಲಿ ಇಡೀ ಕುಟುಂಬವೇ ಸಹಕಾರ ನೀಡುತ್ತಿದೆ. ಮನೆಮಂದಿ ಜತೆಗೆ ಸಹೋದರ, ಅಳಿಯ, ಮಾವ ಹೀಗೆ ಎಲ್ಲರೂ ನಾಟಿ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಇವರೆಲ್ಲರ ಬೆಂಬಲದಿಂದ ಯಾವತ್ತೂ ಈ ಕಾರ್ಯ ತನಗೆ ಹೊರೆ ಎನಿಸಿಲ್ಲ ಎಂದು ಗಂಗಾಧರ ಪೂಜಾರಿ ಅವರು ಹೇಳುತ್ತಿದ್ದಾರೆ.
ಲಾಭಕ್ಕಿಂತಲೂ ಖುಷಿ ಜಾಸ್ತಿ
ತಂದೆ ಕಾಲದಿಂದಲೂ ಈ ಕಾರ್ಯ ಮಾಡುತ್ತಿದ್ದೇವೆ. ಮೊದಲಿಗೆ 10 ಎಕ್ರೆ ಮಾಡಿದ್ದೇವೆ. ಹಿಂದೆ 30-40 ಆಳುಗಳಿಂದ ನಾಟಿ ಮಾಡುತ್ತಿದ್ದೆವು. ಆದರೆ ಕೂಲಿಯಾಳುಗಳ ಸಮಸ್ಯೆಯಿಂದ ಯಾಂತ್ರೀಕೃತ ನಾಟಿ ಮಾಡುತ್ತಿದ್ದೇವೆ. ಮನೆಯಂಗಳದಲ್ಲೇ ಚಾಪೆ ನೇಜಿ ಮಾಡುತ್ತಿದ್ದು, ಇದು ಲಾಭದಾಯಕ. ಲಾಭಕ್ಕಿಂತಲೂ ಹೆಚ್ಚು ಇದರಿಂದ ಸಿಗುವ ಖುಷಿಯೇ ವಿಶೇಷವಾದುದು. ಈ ಬಾರಿ 45 ಎಕ್ರೆ ಗದ್ದೆಯಲ್ಲಿ ನಾಟಿ ಮಾಡುತ್ತಿದ್ದೇವೆ. 1 ಎಕ್ರೆ ಬಿಟ್ಟರೆ ಮತ್ತೆಲ್ಲವೂ ಹಡಿಲು ಭೂಮಿಯೇ. ಈವರೆಗೆ 2.70 ಲಕ್ಷ ರೂ. ಖರ್ಚಾಗಿದೆ. ಇನ್ನು ಗೊಬ್ಬರ, ಕಟಾವು ಸೇರಿ ಒಟ್ಟು ಖರ್ಚು 5 ಲಕ್ಷ ರೂ. ಆಗಬಹುದು. ಉತ್ತಮ ಆದಾಯವೂ ಸಿಗುತ್ತದೆ, ಜತೆಗೆ ನಮ್ಮ ಇಡೀ ಕುಟುಂಬಕ್ಕೆ ವರ್ಷಪೂರ್ತಿ ಅಕ್ಕಿಯೂ ಸಿಗುತ್ತದೆ. ಗದ್ದೆಯ ಮಾಲಕರಿಗೆ 40 ಸೆಂಟ್ಸ್‌ಗೆ 1 ಮುಡಿ ಹಾಗೂ ಎಕ್ರೆಗೆ ಒಂದು ಕ್ವಿಂಟಾಲ್‌ ಅಕ್ಕಿ ಗೇಣಿ ನೀಡುತ್ತೇವೆ.
- ಗಂಗಾಧರ ಪೂಜಾರಿ ಕೋಡಿ, ಕೃಷಿಕ
ಕಷ್ಟಪಟ್ಟರೆ ಲಾಭ..
ಬಹಳ ಹಿಂದೆ ಕೈ ನಾಟಿಯೇ ಜಾಸ್ತಿ ಇತ್ತು. ಈಗ ಯಂತ್ರ ಬಂದಿರುವುದರಿಂದ ತುಂಬಾ ಸಹಾಯವಾಗುತ್ತಿದೆ. ಕೂಲಿ ತುಂಬಾ ಹೊರೆ ಯಾಗುತ್ತಿತ್ತು. ಇಂಥ ಸಂದರ್ಭ ದಲ್ಲಿ ಮನೆಯವರೆಲ್ಲ ಸೇರಿದರೆ ಅನುಕೂಲವಾಗುತ್ತದೆ ಹಾಗೂ ಉತ್ತಮ ಲಾಭವೂ ಸಿಗುತ್ತದೆ.
- ಶಂಕರ ಪೂಜಾರಿ ಕೋಡಿ
-ಪ್ರಶಾಂತ್‌ ಪಾದೆ
"Get Your Daily Dose of News, Entertainment, and Infotainment - All in One Place!"
Udayavani is a leading Kannada Daily Newspaper with editions from Manipal, Bangalore, Mumbai, Hubli, Gulbarga and Davanagere.
Launched in 1971 by Shri. Mohandas Pai and Shri. T.Satish U Pai, Udayavani with combined circulation exceeding 3,00,000 copies is the undisputed leader in Coastal Karnataka region. Over the years Udayavani has been acclaimed for its high quality content, unbiased journalism, extensive local coverage, neat layout and printing excellence.
Udayavani is published by Manipal Media Network Ltd. promoted by the highly acclaimed “The Manipal Group” - a diversified multi-business conglomerate headquartered at Manipal, Karnataka.
OWNERSHIP OF UDAYAVANI NEWSPAPER
Manipal Media Network Ltd also publishes Taranga (Leading Family Weekly Magazine),
Roopatara (Leading Cinema Monthly Magazine in Kannada),
Tunturu (Illustrated Children’s Magazine in Kannada) and
Tushara (Kannada Monthly Magazine).
www.udayavani.com (News Website)
For licensing this content, please write to udayavanionline@gmail.com
…………………………………………………………………………………….
#KarnatakaNews #SoftStory #Udayavani #Newsupdates
Download Udayavani App bit.ly/2Ho0YS4
For more..
Website:
www.udayavani.com
www.udayavani....
samskruti.uday...
Udayavani E-paper :
epaper.udayava...
Facebook:
/ udayavani.webnews
/ udayavanicinema
/ udayavanienglish
KZfaq :
/ udayavanidigital
Twitter:
/ udayavani_web

Пікірлер: 3
@kalpanapoojary916
@kalpanapoojary916 Ай бұрын
Weldone Gangadhar
@swathipoojary7101
@swathipoojary7101 Ай бұрын
😍👏
World’s Largest Jello Pool
01:00
Mark Rober
Рет қаралды 125 МЛН
Parenting hacks and gadgets against mosquitoes 🦟👶
00:21
Let's GLOW!
Рет қаралды 11 МЛН
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 3,4 МЛН
哈莉奎因以为小丑不爱她了#joker #cosplay #Harriet Quinn
00:22
佐助与鸣人
Рет қаралды 10 МЛН
World’s Largest Jello Pool
01:00
Mark Rober
Рет қаралды 125 МЛН