ಏಳು ಮೇಲೇಳೇಳು ಸಾಧುವೆ | ಚಾಗಿಯ ಹಾಡು | Elu Melelelu Sadhuve | Song of Sanyasin | Swami Vivekananda Song

  Рет қаралды 43,549

Jagrut Bharat

Jagrut Bharat

2 жыл бұрын

ಚಾಗಿಯ ಹಾಡು : Chagiya Haadu
ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು;
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು! ||ಪ||
ದೂರದಡವಿಯೊಳೆಲ್ಲಿ ಲೌಕಿಕ ವಿಷಯ ವಾಸನೆ ಮುಟ್ಟದೋ,
ಎಲ್ಲಿ ಗಿರಿ ಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೋ,
ಎಲ್ಲಿ ಕಾಮವು ಸುಳಿಯದೋ - ಮೇಣ್
ಎಲ್ಲಿ ಜೀವವು ತಿಳಿಯದೋ
ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ,
ಎಲ್ಲಿ ಆತ್ಮವು ಪಡೆದು ನಲಿವುದೋ ನಿಚ್ಚವಾಗಿಹ ಶಾಂತಿಯ,
ನನ್ನಿವರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೋ,
ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ
ಅಲ್ಲಿ ಮೂಡಿದ ಹಾಡನುಲಿಯೈ, ವೀರ ಸಂನ್ಯಾಸಿ
ಓಂ! ತತ್! ಸತ್! ಓಂ! ||೧||
"ಬೆಳೆಯ ಕೊಯ್ವನು ಬಿತ್ತಿದಾತನು;
ಪಾಪ ಪಾಪಕೆ ಕಾರಣ;
ವೃಕ್ಷಕಾರ್ಯಕೆ ಬೀಜಕಾರಣ; ಪುಣ್ಯ, ಪುಣ್ಯಕೆ ಕಾರಣ;
ಹುಟ್ಟಿ ಮೈವಡೆದಾತ್ಮ ಬಾಳಿನ ಬಲೆಯ ತಪ್ಪದೆ ಹೊರುವುದು;
ಕಟ್ಟು ಮೀರಿಹನಾವನಿರುವನು? ಕಟ್ಟು ಕಟ್ಟನೆ ಹೆರುವುದು!"
ಎಂದು ಪಂಡಿತರೆಂಬರು-ಮೇಣ್
ತತ್ವದರ್ಶಿಗಳೆಂಬರು!
ಆದೊಡೇನಂತಾತ್ಮವೆಂಬುದು ನಾಮರೂಪತೀತವು;
ಮುಕ್ತಿಬಂಧಗಳಿಲ್ಲದಾತ್ಮವು ಸರ್ವನಿಯಮಾತೀತವು!
ತತ್ವಮಸಿಯೆಂದರಿತು, ಸಾಧುವೆ, ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ಸಾರು ಸಿದ್ಧನೆ, ವಿಶ್ವವರಿಯಲಿ! ಹಾಡು ಸಂನ್ಯಾಸಿ
ಓಂ! ತತ್! ಸತ್! ಓಂ! ||೪||
'ಶಾಂತಿ ಸರ್ವರಿಗಿರಲಿ' ಉಲಿಯೈ, 'ಜೀವಜಂತುಗಳಾಳಿಗೆ
ಹಿಂಸೆಯಾಗದೆ ಇರಲಿ ಎನ್ನಿಂದೆಲ್ಲ ಸೊಗದಲಿ ಬಾಳುಗೆ!
ಬಾನೊಳಾಡುವ ನೆಲದೊಳೋಡುವ ಸರ್ವರಾತ್ಮನು ನಾನಹೆ;
ನಾಕನರಕಗಳಾಸೆಭಯಗಳನೆಲ್ಲ ಮನದಿಂದ ದೂಡುವೆ!'
ದೇಹ ಬಾಳಲಿ, ಬೀಳಲಿ;-ಅದು
ಕರ್ಮನದಿಯಲಿ ತೇಲಲಿ!
ಕೆಲರು ಹಾರಗಳಿಂದ ಸಿಂಗರಿಸದನು ಪೂಜಿಸಿ ಬಾಗಲಿ!
ಕೆಲರು ಕಾಲಿಂದೊದೆದು ನೂಕಲಿ!
ಹುಡಿಯು ಹುಡಿಯೊಳೆ ಹೋಗಲಿ!
ಎಲ್ಲ ಒಂದಿರಲಾರು ಹೊಗಳುವರಾರು ಹೊಗಳಿಸಿಕೊಂಬರು?
ನಿಂದೆ ನಿಂದಿಪರೆಲ್ಲ ಕೂಡಲು ಯಾರು ನಿಂದೆಯನುಂಬರು?
ಪಾಶಗಳ ಕಡಿ! ಬಿಸುಡು, ಕಿತ್ತಡಿ! ಹಾಡು ಸಂನ್ಯಾಸಿ-
ಓಂ! ತತ್! ಸತ್! ಓಂ! ||೭||
ಎಲ್ಲಿ ಕಾಮಿನಿಯೆಲ್ಲಿ ಕಾಂಚನದಾಸೆ ನೆಲೆಯಾಗಿರುವುದೋ,
ಸತ್ಯವೆಂಬುವುದಲ್ಲಿ ಸುಳಿಯದು!
ಎಲ್ಲಿ ಕಾಮವು ಇರುವುದೋ,
ಅಲ್ಲಿ ಮುಕ್ತಿಯು ನಾಚಿ ತೋರದು!
ಎಲ್ಲಿ ಸುಳಿವುದೋ ಭೋಗವು
ಅಲ್ಲಿ ತೆರೆಯದು ಮಾಯೆ ಬಾಗಿಲಿನಲ್ಲಿಹುದು ಭವರೋಗವು;
ಎಲ್ಲಿ ನೆಲೆಸದೋ ಚಾಗವೋ,-ದಿಟ
ವಲ್ಲಿ ಸೇರದೋ ಯೋಗವು!
ಗಗನವೇ ಮನೆ! ಹಸುರೇ ಹಾಸಿಗೆ!
ಮನೆಯು ಸಾಲ್ವುದೆ ಚಾಗಿಗೆ?
ಹಸಿಯೋ, ಬಸಿಯೋ? ಬಿದಿಯು
ಕೊಟ್ಟಾಹಾರವನ್ನವು ಯೋಗಿಗೆ!
ಏನು ತಿಂದರೆ, ಏನು ಕುಡಿದರೆ, ಏನು? ಆತ್ಮಗೆ ಕೊರತೆಯೆ?
ಸರ್ವಪಾಪವ ತಿಂದುತೇಗುವ ಗಂಗೆಗೇಂ ಕೊಳೆ ಕೊರತೆಯೆ?
ನೀನು ಮಿಂಚೈ! ನೀನು ಸಿಡಿಲೈ! ಮೊಳಗು ಸನ್ಯಾಸಿ-
ಓಂ! ತತ್! ಸತ್! ಓಂ! ||೮||
ನಿಜವನರಿತವರೆಲ್ಲೋ ಕೆಲವರು; ನಗುವರುಳಿದವರೆಲ್ಲರೂ
ನಿನ್ನ ಕಂಡರೆ, ಹೇ ಮಹಾತ್ಮನೆ! ಕುರುಡರೇನನು ಬಲ್ಲರು?
ಗಣಿಸದವರನು ಹೋಗು, ಮುಕ್ತನೆ, ನೀನು ಊರಿಂದೂರಿಗೆ
ಸೊಗವ ಬಯಸದೆ, ಅಳಲಿಗಳುಕದೆ! ಕತ್ತಲಲಿ ಸಂಚಾರಿಗೆ
ನಿನ್ನ ಬೆಳಕನು ನೀಡೆಲೈ;- ಸಂ
ಸಾರ ಮಾಯೆಯ ದೂಡೆಲೈ!
ಇಂತು ದಿನದಿನ ಕರ್ಮಶಕ್ತಿಯು ಮುಗಿವವರೆಗೂ ಸಾಗೆಲೈ!
ನಾನು ನೀನುಗಳಳಿದು ಆತ್ಮದೊಳಿಳಿದು ಕಡೆಯೊಳು ಹೋಗೆಲೈ!
ಏಳು ಮೇಲೇಳೇಳು, ಸಾಧುವೆ, ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ತತ್ವಮಸಿ ಎಂದರಿತು ಹಾಡೈ, ಧೀರ ಸನ್ಯಾಸಿ-
ಓಂ! ತತ್! ಸತ್! ಓಂ! ||೯||
#SwamiVivekanand #chagiyaHaadu #KannadaSong

Пікірлер: 19
@shantabaim1108
@shantabaim1108 Жыл бұрын
ಅರ್ಥಪೂರ್ಣವಾದ ಹಾಡು... ತುಂಬಾ ಧನ್ಯವಾದಗಳು... 💐🙏
@Lachamanna.1975
@Lachamanna.1975 Жыл бұрын
ಓಂ ಗುರುಭ್ಯೋ ನಮಃ 🙏
@mohankumarhk3911
@mohankumarhk3911 Жыл бұрын
🙏🙏
@svprasanmaru3030
@svprasanmaru3030 9 ай бұрын
ಜೈ ರಾಮಕೃಷ್ಣ ತಂದೆಯೆ ಜೈ ಶಾರದಾ ಮಾ ಜೈ ಸ್ವಾಮೀಜಿ ವಿವೇಕಾನಂದ ನಿಮಗೆ ನಮನಗಳು ಎಸ್ ವಿ ಪ್ರಸನ್ನರು
@subramanyajn5250
@subramanyajn5250 Жыл бұрын
ಅದ್ಭುತವಾದ ಹಾಡು
@svprasanmaru3030
@svprasanmaru3030 7 ай бұрын
ಜೈ ರಾಮಕೃಷ್ಣ ತಂದೆಯೆ ಜೈ ಶಾರದಾ ಮಾ ಜೈ ಸ್ವಾಮೀಜಿ ವಿವೇಕಾನಂದ ನಿಮಗೆ ನಮನಗಳು ಎಸ್ ವಿ ಪ್ರಸನ್ನರು ಮತ್ತು ಶ್ರೀಮತಿ ರೇಖಾ ಎಸ್ ವಿ ಪ್ರಸನ್ನರು
@bharathb8822
@bharathb8822 Жыл бұрын
🙏🙏🙏♥️
@manjappah7059
@manjappah7059 3 ай бұрын
ಮನಸ್ಸು ಉಲ್ಲಾಸದಿಂದ ಇರಲು ಈ ಹಾಡು ಕೇಳಬೇಕು.
@murageshrodagi7832
@murageshrodagi7832 11 ай бұрын
People who raised by Swami Vivekananda ashram or Shri Ramakrishna ashram knows the importance of this song !
@crazywhale_777
@crazywhale_777 3 ай бұрын
Even in our morarji school We used to sing every day
@tarahegde9051
@tarahegde9051 3 ай бұрын
ಬಹಳ ಸುಂದರ ಹಾಡು 👌🏻👌🏻
@lovelight181
@lovelight181 6 ай бұрын
Now we can head somewhere near making BHARAT AS VISHWA GURU❤
@shruthibn4645
@shruthibn4645 8 күн бұрын
Beautiful song ❤❤🎉🎉😮😮😊😊😊❤❤❤❤❤❤❤❤❤🩷🩵🧡
@manjunathmla5424
@manjunathmla5424 Жыл бұрын
ಮಂಜುನಾಥ್
@sadashivasasimane4781
@sadashivasasimane4781 6 ай бұрын
Super
@nagarajanagaraja7142
@nagarajanagaraja7142 Жыл бұрын
ಈ ಹಾಡನ್ನು ಎಷ್ಟು ಸಲ ಕೇಳಿದರು ಬೇಜಾರು ಹಾಗುವುದೇ ಇಲ್ಲ.
@rakshithamj2533
@rakshithamj2533 Жыл бұрын
🙏
@yogichinni6044
@yogichinni6044 6 ай бұрын
🙏
НЫСАНА КОНЦЕРТ 2024
2:26:34
Нысана театры
Рет қаралды 1,4 МЛН
50 YouTubers Fight For $1,000,000
41:27
MrBeast
Рет қаралды 211 МЛН
Каха заблудился в горах
00:57
К-Media
Рет қаралды 9 МЛН
Sri Venkateswara Suprabhatham | M.S. Subbulakshmi, Radha Viswanathan | Carnatic Classical Music
20:47
Prarthana  Pushpanjali   (Part-01) By Swami Purushottamanandaji
30:16
Ramakrishna Vivekananda Vedanta Ashrama
Рет қаралды 56 М.
Swami Swatmaramananda Sri Gandha Naanagi #bhajan #ramakrishna #holymother #krishna #swamivivekananda
8:30
Guru Anand KC ಗುರು ಆನಂದ
Рет қаралды 13 М.
НЫСАНА КОНЦЕРТ 2024
2:26:34
Нысана театры
Рет қаралды 1,4 МЛН