No video

A Heart touching Poem | Lokantha | Poetry | Ravindra nayak sannakkibettu | Amita ravikiran

  Рет қаралды 1,949

Ravindra nayak sannakkibettu

Ravindra nayak sannakkibettu

Күн бұрын

Modern poetry
Lokanatha
ಲೋಕಾಂತ
(ಕನ್ನಡ ಕವಿತೆ)
ಲೋಕಾಂತ
ಕೆಳ ಅಂತಸ್ತಿನ ಮನೆಯಲ್ಲಿ
ಜೋರಾಗಿ ಅಳುವ ಮಗುವಿನ ಸದ್ದು,
ಸುಮ್ಮನೆ ಕುಳಿತಿದ್ದ ನನ್ನ ಕಿವಿಗೂ ಬಿದ್ದು
ಒಂದರೆ ಕ್ಷಣ ವಿಚಲಿತವಾಯ್ತು ಮನಸ್ಸು.
ಅಪ್ಪಳಿಸಿ ಬಂದ ಗಂಡು ಸದ್ದು,
ಧಢಾರನೇ ಬಾಗಿಲು ಹಾಕಿದ ಸದ್ದು.
ಆಳದ ಗುಹೆಯಿಂದ ಹೊರಬಿದ್ದ ಹಾಗೆ
ಮತ್ತೆ ಕ್ಷೀಣವಾದರೂ ಅಳುವಿನ ಸದ್ದು,
ಕಣ್ಣು ಮಾತ್ರ ನೋಟ ಹೊರಡಿತು.
ಪಕ್ಕದ ಖಾಲಿ ಸೈಟ್ ನಲ್ಲಿ ಅರ್ಧ ಕಟ್ಟಿದ ಗೋಡೆಯ ಮೇಲೆ ಕಲ್ಲಿಟ್ಟು, ನೂಲು ಹಿಡಿಯುತ್ತಿರುವ ವ್ಯಕ್ತಿಯ ಕಿವಿಗೂ ಬಿದ್ದಿರಬಹುದಾ ಈ ಕೂಗು?
ತರಕಾರಿ ಗಾಡಿ ಮನೆಯೆದುರು ಬಂದು ಆಗಲೇ ಬಹಳ ಹೊತ್ತಾಯಿತು.
ಸೊಪ್ಪು ,ತರ್ಕಾರಿ
ಬೀಟ್ರೋಟ್ ಟೊಮ್ಯಾಟೊ...
ಯಾವುದೇ ಏರಿಳಿತವಿಲ್ಲದ ಸಹಜ ಕೂಗು.
ರಸ್ತೆಯ ತುಂಬಾ ನಡೆಯುತ್ತಿರುವುದು ನಿತ್ಯ ವ್ಯಾಪಾರ.
ತಟ್ಟಿದಂತೆ ಕಾಣಲಿಲ್ಲ ಯಾರಿಗೂ
ತನ್ನ ಹೊರತಾದ ಬೇರೆ ಸದ್ದು!
ತನ್ನದೇ ಗುಂಗಲ್ಲಿ ಸಾಗುವ ಲೋಕ
ಕ್ರೌರ್ಯಕ್ಕೂ ಹೊರಗಾಯಿತೇ?
ಅರಳುವ ಹೂವಿಗೂ
ಕಣ್ಣಿಲ್ಲ
ನರಳುವ ಅಳುವಿಗೂ
ಕಿವಿಯಿಲ್ಲ.
ನನ್ನ ಕಿವಿಯಲ್ಲಿ ಹೆಚ್ಚಾಯಿತೇ
ಮತ್ತೆ ಮತ್ತೆ ಮಗುವಿನ ಕೂಗು?
ಎಲ್ಲಿಲ್ಲದ ಸಿಟ್ಟಿನಿಂದ ಧಡಬಡನೇ
ಕೆಳಗಿಳಿದು ಬಾಗಿಲು ಬಡಿದೆ,
ಲೋಕದ ಭಾರವೆಲ್ಲಾ
ಈಗ ಹೆಗಲ ಮೇಲೆ!
ತೆರೆದ ಬಾಗಿಲ ಮಂದೆ ಪ್ರಶ್ನಾರ್ಥಕವಾಗಿ ನೋಡುತ್ತಿರುವ ಅದೇ ಗಂಡುದನಿಯ ಆಸಾಮಿ,
ಇನ್ನೂ ಉಮ್ಮಳಿಸಿ ಅಳುತ್ತಿರುವ ಮಗು;
ಮತ್ತು
ಕೆನ್ನೆ ಮೇಲೆ ಮೂಡಿದ್ದ ನಾಲ್ಕು ಬೆರಳು!
"ಇಲ್ವೇನ್ರಿ ನಿಮಗೆ ಕರುಳು?
ಹೊಡಿತೀರಲ್ರೀ ಹೀಗೆ ಮಗೂನ?
ನಾಚಿಕೆ ಆಗಲ್ವಾ?"
ದಬಾಯಿಸಿದರೂ,
ಮಾತಿರದೆ ಸುಮ್ಮನೇ ನೋಡುತ್ತಾ ನಿಂತ ಗಂಡಸು
ಮತ್ತು ಅವನ ಮೌನ;
ಪ್ರತಿಭಟಿಸುವುದನ್ನೇ ಮರೆತ ಲೋಕದ
ಪ್ರತಿರೂಪದಂತಿತ್ತು!
ಸಿಟ್ಟು ನೆತ್ತಿಗೇರಿ ಅಂತಃಕರಣ ಬಹುವಾಗಿ ಉಕ್ಕಿ,
ಮಗುವನ್ನು ಎತ್ತಿಕೊಳ್ಳಲು ಚಾಚಿದರೆ ಕೈ ;
ಓಡಿ ಹೋಗಿ ತನ್ನ ಅಪ್ಪನನ್ನೇ ಬಾಚಿ ತಬ್ಬಿಕೊಂಡಿತು ಮಗುವಿನ ಎರಡೂ ಕೈ!
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು.
ಆಲಾಪ ಮತ್ತು ವಾಚನ: ಅಮಿತಾ ರವಿಕಿರಣ್
#poetry
#kannada
#relationship
#kavita
#mushaira

Пікірлер: 20
@mallikasnayak6318
@mallikasnayak6318 2 жыл бұрын
ಚೆನ್ನಾಗಿದೆ "ಲೋಕಾಂತ", ವಾಚನ 👌 ತಣ್ಣಗಿನ ಕ್ರೌರ್ಯ,ಮಮತೆ, ಕರುಣೆಯ ಲೋಕಾಂತ.
@ramyavinay292
@ramyavinay292 2 жыл бұрын
ವಾಚನದ ಜೊತೆಯಲ್ಲಿನ ಆಲಾಪ ಕವಿತೆಯ ಆಳವನ್ನು ತಲುಪುವ ದಾರಿ...😍👌👌
@shrinivasanayakbhavageethe9199
@shrinivasanayakbhavageethe9199 2 жыл бұрын
ತುಂಬಾ ಚಂದದ ಕವನ ಮತ್ತು ವಾಚನ 👌
@vijayalakshmirao6702
@vijayalakshmirao6702 2 жыл бұрын
ತುಂಬಾ ಹೃದಯವಿದ್ರಾವಕ ವಿವರಣೆ. ಎಷ್ಟು ಆಳ ಧೈವನಿರ್ಮಿತ ಬಂಧನ. ಅರಗಿಸಿಕೊಳ್ಳಲು ಶಕ್ತಿ ಸಾಲದೆನಿಸುತ್ತಿದ. ತುಂಬಾ ಸೊಗಸಾಗಿ ಜೋಡಿಸಿದ ಕನ್ನಡ ನುಡಿ ಮುತ್ತುಗಳು. ಆ ದೇವರ ಕೃಪ ಸದಾ ನಿಮ್ಮ ಮೇಲಿರಲಿ.
@Ravindranayaksannakkibettu
@Ravindranayaksannakkibettu 2 жыл бұрын
ಇಂತಹ ಒಂದು‌ ಮೆಸೇಜು ಸಾಕು ಕವಿತೆ ಹೃದಯಗಳನ್ನು ಮುಟ್ಟಿದೆ ಅಂದುಕೊಳ್ಳುತ್ತೇನೆ....ನಿಮ್ಮ ಪ್ರೋತ್ಸಾಹ ಸದಾ ಇರಲಿ 💐💐💐❤❤❤
@Lachamanna.1975
@Lachamanna.1975 2 жыл бұрын
ಗುರುಗಳೇ 👌👌👌
@kavitahegde5583
@kavitahegde5583 2 жыл бұрын
ವಾಚನ ಮತ್ತು ಕವನ 👌👌👌
@Vinutha2368
@Vinutha2368 Жыл бұрын
" ಲೋಕಾಂತ".. ...ಕೇಳಿ ಮನಸ್ಸು ಭಾರವಾಯಿತು😔. ಅಷ್ಟು ಅದ್ಭುತವಾಗಿತ್ತು ನಿಮ್ಮ ಕವಿತೆ❤️👌👌 ಸೊಗಸಾದ ವಾಚನ. 👌👌. Tq.sir 🙂🙏
@vaninayakparkala5227
@vaninayakparkala5227 2 жыл бұрын
ಏನೂ ಅರಿಯದ ಕಂದ ❤❤
@rebeccaviji4742
@rebeccaviji4742 2 жыл бұрын
ಬಹಳ ಭಾವನಾತ್ಮಕ ಹಾಗೂ ಮನ ಮುಟ್ಟುವಂತಹ ಸಂದೇಶ. ಇನ್ನು ಬಹಳಷ್ಟು ವಿಡಿಯೋಗಳು ಬರಲಿ ನಿಮ್ಮ ಬತ್ತಳಿಕೆಯಿಂದ. ಈ ಸಮಾಜದ ಸುಧಾರಣೆ ನಿಮ್ಮಿಂದ ಆಗಲಿ ಎಂದು ಆಶಿಸುತ್ತೇನೆ. 💐
@sandhyanayak6821
@sandhyanayak6821 2 жыл бұрын
ತುಂಬಾ ಚೆನ್ನಾಗಿದೆ ❤
@sanju_see5302
@sanju_see5302 2 жыл бұрын
Nice
@gururajasr6207
@gururajasr6207 2 жыл бұрын
ಬಹಳ ಚೆನ್ನಾಗಿದೆ ವಿಷಯಕ್ಕೆ ತಕ್ಕಂತೆ ವಾಚನ👌
@dhruvanayak9635
@dhruvanayak9635 2 жыл бұрын
Super ❤
@hanicreations6703
@hanicreations6703 2 жыл бұрын
ಮತ್ತೆ ನೆನಪಾಯಿತು ಬಾಲ್ಯ 🙏🏼🙏🏼
@karthikkote408
@karthikkote408 2 жыл бұрын
ಚೆನ್ನಾಗಿದೆ 😊😊👌🏼
@dr.badarinathjahagirdar1466
@dr.badarinathjahagirdar1466 2 жыл бұрын
ಮನಸ್ಸಿಗೆ ಹಿಡಿಸಿತು
Bonus Video 🎥 | Stand up Comedy by Niroop Mohan | THE NIROOP MOHAN SHOW 🍿
18:27
Happy birthday to you by Tsuriki Show
00:12
Tsuriki Show
Рет қаралды 10 МЛН
Running With Bigger And Bigger Feastables
00:17
MrBeast
Рет қаралды 123 МЛН
Gangavathi Pranesh latest jokes with Moral story || ಪ್ರಾಣೇಶ್ ರವರ ನೀತಿ ಹಾಸ್ಯ || Pranesh Jokes
27:13
PRANESH PARYATANE ಪ್ರಾಣೇಶ್ ಪರ್ಯಟನೆ
Рет қаралды 3,1 МЛН
"The Rain"  Amita Ravikiran & Tessa Ann (Make Music Day)
6:00
BeyondSkinMedia
Рет қаралды 1,5 М.
God Sees the Truth But Waits ಕನ್ನಡದಲ್ಲಿ
23:12
Vijayeendra Kshatriya
Рет қаралды 5 М.
Happy birthday to you by Tsuriki Show
00:12
Tsuriki Show
Рет қаралды 10 МЛН