Рет қаралды 62,433
ಹೂ ಹರೆಯದ ಹೊಂಗನಸುಗಳೆ | ಗೀತ ಭಾರತಿ
------------------------------------------------------------------------------
ಹೂ ಹರೆಯದ ಹೊಂಗನಸುಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ
ಕತ್ತಲೆಗಿದು ಸಾವು ಸುತ್ತಲು ಮುಂಜಾವು
ಕರೆವಳುಷಾದೇವಿ ಮಂಗಳೆ ಸುಮಂಗಳೆ
ಎಚ್ಚರಾಗಿ ಕನಸು ಕಂಗಳೆ || ಪ ||
ನೋವಿನಿರುಳು ನರಳಿ ನರಳಿ ಸರಿದಿದೆ
ನಗುವು ನಲಿವಿಗಾಗಿ ಕದವ ತೆರೆದಿದೆ
ಸೂತ್ರಬದ್ಧ ಕಾರ್ಯ ನಮ್ಮ ಎದುರಿದೆ
ಲೋಕ ನಮ್ಮ ನಿಲುವಿಗಾಗಿ ಕಾದಿದೆ
ಅಬಲ ಶಕ್ತರಲ್ಲ, ಸಬಲರು ನಾವೆಲ್ಲಾ
ಹಗಲಿಗರಳಬೇಕು ನೈದಿಲೆ
ಹುಲಿಯ ಮಣಿಸಿ ಹಲ್ಲೆಣಿಸಿದ ಭರತ ಬಲ
ಚಕ್ರವ್ಯೂಹ ಮುರಿದಾ ಅಭಿಮನ್ಯು ಛಲ
ಹುಲಿಯ ಹೊಡೆದ ವೀರ ಹುಡುಗ ಹೊಯ್ಸಳಾ
ವೀರ ವಾರಸಿಕೆಯೆ ಹಿಂದು ಸಂಕುಲ
ಪುತ್ರಭಾವದೊಳಗೆ, ಕ್ಷಾತ್ರಭಾವ ಬೆಳಗೆ
ರಾಷ್ಟçಶಕ್ತಿಗದುವೆ ಹಿನ್ನೆಲೆ || ೨ ||
ಸೋಲಿನಸುರ ಹೊಂದಬೇಕು ಅವನತಿ
ಗೆಲುವಿನ ಸ್ವರ ಪಡೆಯಬೇಕು ಉನ್ನತಿ
ಕಾರ್ಯಕಾಲ ಕಾಯುತಿಹಳು ಭಾರತಿ
ರಾಷ್ಟ್ರರಥಕೆ ನಮ್ಮ ಶಕ್ತಿ ಸಾರಥಿ
ಛಲದಲಿ ಒಂದಾಗಿ ಜಗದಲಿ ಮುಂದಾಗಿ
ನಿಲುವುದೊAದೆ ನಮ್ಮ ಮುನ್ನೆಲೆ || ೩ ||
Visit us at
►KZfaq: / samvadk
►INSTAGRAM : samvada_?igshid...
►TWITTER : VSKKarnataka?s=09
►FACEBOOK : / samvada
►WEBSITE : samvada.org/
#samvada