Рет қаралды 161,005
#ಸರ್ವವಿದ್ಯೆಗಳಿಗೆ_ನಿಧಿ
ಮಕ್ಕಳಿಗೆ ದಕ್ಷಿಣಾ ಮೂರ್ತಿ ಸ್ತೋತ್ರ ಹೇಳಿಕೊಡಿ , ಮಕ್ಕಳಲ್ಲಿ ಎಂತಹ ಅದ್ಭುತ ಬದಲಾವಣೆ ಆಗುತ್ತದೆ
ದಕ್ಷಿಣಾಮೂರ್ತಿ ವಿದ್ಯೆಗೆ ಅಧಿಷ್ಠಾತ್ಮ ದೇವತೆ ಎಂದು ಉಪನಿಷತ್ತು ಮತ್ತು ಸ್ತೋತ್ರಗಳಿಂದ ತಿಳಿದು ಬರುತ್ತದೆ.
ದಕ್ಷಿಣಾಮೂರ್ತಿಯು ಪರಮೇಶ್ವರನ ಲೀಲಾ ವಿಭೂತಿಗಳಲ್ಲಿ ಒಂದು. ದಕ್ಷಿಣಾ ಎಂದರೆ ಬುದ್ಧಿ. ಆ ಬುದ್ಧಿಯ ಜ್ಞಾನದ ಕಡೆಗೆ ಅಭಿಮುಖ ನಾಗಿರುವುದರಿಂದ ಈ ಹೆಸರು. ಮಕ್ಕಳಲ್ಲಿ ಜ್ಞಾನ ವಾಕ್ಚಾತುರ್ಯ ,ಸಿದ್ಧಿ ಲಭಿಸುತ್ತದೆ.. ಅತ್ಯಂತ ಸರಳ ಸ್ತೋತ್ರ ಪ್ರತಿದಿನ ಹನ್ನೊಂದು ಸಲ ಹೇಳಿಸಿ ನೋಡಿ ...
#ಸ್ತೋತ್ರ
ಗುರುವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ |ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||
#ಅರ್ಥ:-ಸರ್ವಲೋಕಗಳಿಗೆ ಗುರುವೂ ಭವರೋಗಿಗಳಿಗೆ ವೈದ್ಯನೂ ಸರ್ವವಿದ್ಯೆಗಳಿಗೆ ನಿಧಿಯೂ ಆದ ದಕ್ಷಿಣಾಮೂರ್ತಿಗೆ ನಮಸ್ಕಾರ.
✍️✍️✍️ ವೀಣಾ ಜೋಶಿ