Рет қаралды 43,643
ಮೌನ ತಬ್ಬಿತು ನೆಲವ - ಗೋಪಾಲಕೃಷ್ಣ ಅಡಿಗ
Mouna Tabbitu Nelava
ಸಂಗ್ರಹ - ಗೀತ ಮಾಧುರಿ
ರಚನೆ - ಗೋಪಾಲಕೃಷ್ಣ ಅಡಿಗ
ಸಿ ಅಶ್ವತ್ ಅವರ ಕಂಠದಲ್ಲಿ
ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ;
ನೋಡಿ ನಾಚಿತು ಬಾನು; ಸೇರಿತು ಕೆಂಪು ಸಂಜೆಯ ಕದಪಲಿ.
ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು;
ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು.
ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು;
ನೆಲವು ತಣಿಯಿತು, ಬೆವರು ಹನಿಯಿತು; ಬಾಷ್ಪ ನೆನೆಸಿತು ಹುಲ್ಲನು.
ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರೆನೆ ಬೀಸಿತು,
ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು.
To Buy DVD : www.totalkannada.com/