No video

Nanna devaru ನನ್ನ ದೇವರು | Ravindra nayak sannakkibettu | Chidambara kulakarni | Pramod sagar

  Рет қаралды 2,375

Ravindra nayak sannakkibettu

Ravindra nayak sannakkibettu

Күн бұрын

ನನ್ನ ದೇವರು
Nanna devaru
Kannada poetry
ಕನ್ನಡ ಕವಿತೆ
Kannada open mic poetry
ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ವಾಚನ: ಚಿದಂಬರ ಕುಲಕರ್ಣಿ
ಸಂಕಲನ: ಪ್ರಮೋದ ಸಾಗರ
Special Thanks to Jayanth Kumar T.V.
For more Ravindra nayak sannakkibettu poems:
ಭಾವಪೂರ್ಣ ಭಾವಗೀತೆ Must watch
• Kannada bhavageethe |D...
Kannadi ಕನ್ನಡಿ
• Trending | Kannadi ಕನ್...
Agnidivya ಅಗ್ನಿದಿವ್ಯ
• ಅಗ್ನಿದಿವ್ಯ Agnidivya |...
Lokantha ಲೋಕಾಂತ
• A Heart touching Poem ...
Hudukata ಹುಡುಕಾಟ
• ಹುಡುಕಾಟ Hudukaata | Ra...
ನನ್ನ ದೇವರು
ನನ್ನ ದೇವರು
ಕಾಲು ಮುರಿದುಕೊಂಡು ಬಿದ್ದಿದ್ದಾನೆ,
ಗರ್ಭಗುಡಿಯಿಂದ ಎಂದೂ
ಹೊರಬರಲಾಗದೆ.
ನನಗಿನ್ನೂ ಚೆನ್ನಾಗಿ ನೆನಪಿದೆ
ಅವನು ಬದುಕಿದ ರೀತಿ,
ಊರಿನ ಮುಂದೆ ಒಂದು
ಕಲ್ಲು ಬಿದ್ದು ಗುಹೆಯಾಗಿರುವ ಕೊಳ;
ಅದರ ದಂಡೆಯ ಮೇಲೆ ಕುಳಿತೇ
ಬೀಡಿ ಎಳೆಯುವುದು,
ಕಾಲು ಇಳಿ ಬಿಟ್ಟು ಇಷ್ಟದ ಮೀನುಗಳಿಂದ
ಕಚ್ಚಿಸಿಕೊಳ್ಳುತ್ತಾ ಎಲೆ ಜಗಿಯುವುದು,
ಸಂಜೆ ಗೂಡು ಸೇರಲು ಹಾರುವ
ಹಕ್ಕಿ ಸಾಲನ್ನು ನೋಡುತ್ತಾ
ತನ್ನಲ್ಲೇ ನಗುವುದು; ನಿರುಪದ್ರವಿ ದೇವರು.
ಮಗುವಾಗಿದ್ದಾಗ ನನ್ನ ಉಚ್ಚೆ ಹೇಲನ್ನೂ
ಬಾಚಿದ್ದ ನನ್ನ ದೇವರು
ನನ್ನ ಮೇಲೆ ಮುನಿಸಿಕೊಂಡದ್ದೇ ಇಲ್ಲ.
ಅವನ ಹೆಗಲ ಮೇಲೆ ಕೂತೇ
ಊರೂರು ಸುತ್ತುತ್ತಿದ್ದೆ,
ಊರ ಜಾತ್ರೆಯಲ್ಲಿ ರಥದ ಮೇಲಿರುತ್ತಿದ್ದ
ದೇವರನ್ನು ನನಗೆ ತೋರಿಸುತ್ತಿದ್ದ,
ಕೈಮುಗಿಯಲೂ ಹೇಳುತಿದ್ದ.
ನನಗಲ್ಲಿ ದೇವರು ಕಾಣಿಸುತ್ತಿರಲಿಲ್ಲ.
ಆವತ್ತು ಆ ಕೊಳದ ಯಾವುದೋ
ಮುದಿ ಮೀನು ಸತ್ತದ್ದಕ್ಕೆ
ಬೀಡಿ ಎಲೆ ಹರಟೆ
ಎಲ್ಲಾ ಬಿಟ್ಟು ಒಳ್ಳೆಯವನಾಗಿದ್ದ,
ಅದರ ಮರುದಿನವೇ ದಂಡೆಯಿಂದ ಜಾರಿ
ಕಾಲು ಮುರಿದುಕೊಂಡ;
ಪಾಪ ಯಾರ ಕೆಟ್ಟ ಕಣ್ಣು ಬಿತ್ತೋ
ನನ್ನ ದೇವರ ಮೇಲೆ...!
ಈಗ ಸದಾ ಗರ್ಭಗುಡಿಯಲ್ಲೇ
ಮಲಗಿರುವ ದೇವರಿಗೆ
ಹೊರಗಿನ ಬೆಳಕು ಕಾಣುವಾಸೆ,
ಹೂವು,ಹಸಿರು,ಪೇಟೆಯ ಬೀದಿ
ಊರಿನ ಕೊಳ ಹಕ್ಕಿಗಳ ಸಾಲು
ಕಣ್ತುಂಬಿಕೊಳ್ಳುವಾಸೆ.
ನನಗೂ ಅನಿಸುತ್ತದೆ,
ಅವನನ್ನು ಹೊರ ತರಬೇಕು,
ಲೋಕ ತೋರಿಸಬೇಕು ಎಂದು.
ಪಲ್ಲಕ್ಕಿ ಹೊರುವ ನಾಲ್ಕು ಜನರಿಗಾಗಿ
ಹುಡುಕಾಡುತ್ತೇನೆ.
ತಲೆ ಮೇಲೆ ಹೊತ್ತುಕೊಂಡು
ಪೌಳಿ ಸುತ್ತುವ ಮಂದಿಗಾಗಿ
ಹುಡುಕಾಡುತ್ತೇನೆ.
ಸಿಕ್ಕರೂ ಅವರು ಬೇಡುವ ಕಾಣಿಕೆ
ಕೊಡಲಾಗದ ಬಡತನ ನನ್ನದು.
ಹೇಳಿ ನನ್ನ ದೇವರಿಗಾಗಿ ಯಾವ
ದೇವರಿಗೆ ಹರಕೆ ಕಟ್ಟಲಿ?
ಮತ್ತೆ ಕಾಲು ಬಂದು ಕುಣಿಯಲು
ಯಾವ ದೇವರಿಗೆ ಉತ್ಸವ ಮಾಡಿಸಲಿ?
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#poetry
#appa
#project
#kannadakavanagalu
#openmic

Пікірлер: 35
@gunajeramachandrabhat
@gunajeramachandrabhat 2 жыл бұрын
ನಿಮ್ಮ ದೇವರು ಇಷ್ಟವಾದ. ಹೊಸ ರೀತಿಯ ಕವನ ಕಣ್ತೆರೆಸುವಂತಿದೆ
@Lachamanna.1975
@Lachamanna.1975 2 жыл бұрын
👌 ಗುರುಗಳೇ
@sandhyanayak6821
@sandhyanayak6821 2 жыл бұрын
ಅರ್ಥಗರ್ಭಿತ...
@thukram4275
@thukram4275 2 жыл бұрын
Appa Amma ne nana devaru
@thukram4275
@thukram4275 2 жыл бұрын
Super Anna changide
@5c-04sanvi4
@5c-04sanvi4 2 жыл бұрын
ತೇವವಾಯ್ತು ಕಣ್ಣು 😞
@shrinivasanayakbhavageethe9199
@shrinivasanayakbhavageethe9199 2 жыл бұрын
ಕವಿತೆ ಬಹಳ ಭಾವನಾತ್ಮಕವಾಗಿದೆ. ನಿನ್ನ ದೇವರ ಕಷ್ಟ ಬೇಗ ನೀಗಲಿ ರವಿ 🙏 ವಾಚನ, ಸಂಕಲನ ಬಹಳ ಚೆನ್ನಾಗಿದೆ.
@Ravindranayaksannakkibettu
@Ravindranayaksannakkibettu 2 жыл бұрын
ಥ್ಯಾಂಕ್ಸು ❤
@yathishshetty8915
@yathishshetty8915 2 жыл бұрын
👌🏻
@mamathaacharya4520
@mamathaacharya4520 2 жыл бұрын
❤️
@julietveigas5161
@julietveigas5161 2 жыл бұрын
ಸೂಪರ್
@sukanyanayak542
@sukanyanayak542 2 жыл бұрын
ಬದುಕಿನ ನೈಜತೆಯ ಚಿತ್ರಣ ಸುಂದರವಾಗಿದೆ
@sanju_see5302
@sanju_see5302 2 жыл бұрын
👌👌
@vaninayakparkala5227
@vaninayakparkala5227 2 жыл бұрын
ಅಪ್ಪ ಅಪ್ಪ ❤❤
@udaykumarhabbu738
@udaykumarhabbu738 Жыл бұрын
ಚೆನ್ನಾಗಿದೆ
@nemikasantha4420
@nemikasantha4420 Жыл бұрын
ಹೀಗೂ ಒಂದು ವ್ಯಕ್ತಿ ಕಲ್ಪನೆ ಮಾಡಬಹುದೇ ಎಂದು ಒಂದು ಕ್ಷಣ ಮತ್ತೇ ಪ್ರಾರಂಭದಿಂದ ಕೇಳಿದೆ. ಅಧ್ಭುತ ಕಲ್ಪನೆ, ಸಮಾನ್ಯದಲ್ಲಿ ಅಸಾಮಾನ್ಯ ಎಂದನಿಸಿದ ಬರವಣಿಗೆ ಮತ್ತೇ ಅಭಿಮಾನಿಯಾಗಿಬಿಟ್ಟೆ
@Ravindranayaksannakkibettu
@Ravindranayaksannakkibettu Жыл бұрын
ನಿಮ್ಮ Comment ನೋಡಿ ತುಂಬಾ ದಿನ ಆಯ್ತು. ನಿಮ್ಮ ಪ್ರತೀ ಪ್ರತಿಕ್ರಿಯೆ ಕೂಡಾ ವಿಶೇಷ ನನಗೆ 💐
@nemikasantha4420
@nemikasantha4420 Жыл бұрын
@@Ravindranayaksannakkibettu ನಿಮ್ಮ reply ಗಾಗಿ ಕಾಯ್ತಾ ಇದ್ದೆ
@khushin1043
@khushin1043 2 жыл бұрын
Just 👌👌👌👌👌👌
@Ravindranayaksannakkibettu
@Ravindranayaksannakkibettu 2 жыл бұрын
Thanksuuuu
@gururajasr6207
@gururajasr6207 2 жыл бұрын
ತಾಯಿಯ ಮಡಿಲು ಅಪ್ಪನ ಹೆಗಲು ಪವಿತ್ರ ಸ್ಥಾನಗಳು,, ಬಹಳ ಚೆನ್ನಾಗಿದೆ ರವೀಂದ್ರ ಸರ್ ನಿಮ್ಮ ಮನದಾಳದಿಂದ ತುಂಬಿಬಂದ ಸಾಹಿತ್ಯ ಅದ್ಭುತ,, ನಿಮ್ಮಭಿಮಾನಿ 🙏🙏
@deverkinni
@deverkinni 2 жыл бұрын
ತುಂಬಾ ತುಂಬಾ ಸೂಪರ್ ಆಗಿದೆ. ನಿಮ್ಮ ಕವನ ಸಾಹಿತ್ಯಕ್ಕೆಲ್ಲಾ ಇದು ಹೊನ್ನ ಕಲಶ ಎನ್ನುವುದೇ ಸೂಕ್ತ ..
@karthikkote408
@karthikkote408 2 жыл бұрын
ಚೆನ್ನಾಗಿದೆ ❤️👌🏼
@yogishmalligemaadu3779
@yogishmalligemaadu3779 2 жыл бұрын
ಅರ್ಥವಾಯಿತು ನಿಮ್ಮೊಳಗಿನ ನೋವು 😔😔
@panchajanyaproductions
@panchajanyaproductions 2 жыл бұрын
ಚಂದ ಗೆಳೆಯಾ
@sandhyageethageetha4633
@sandhyageethageetha4633 2 жыл бұрын
ಮಾರ್ಮಿಕವಾಗಿದೆ
@nemikasantha4420
@nemikasantha4420 2 жыл бұрын
ಕಲ್ಪನೆಗೂ ಮೀರಿದ ಬರಹ
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 18 МЛН
Comfortable 🤣 #comedy #funny
00:34
Micky Makeover
Рет қаралды 16 МЛН
Nooru novina naduve | ನೂರು ನೋವಿನ ನಡುವೆ
0:51
Ravindra nayak sannakkibettu
Рет қаралды 4,3 М.
All is well #Life
0:32
Ravindra nayak sannakkibettu
Рет қаралды 2,2 М.
Motivational song
0:51
Ravindra nayak sannakkibettu
Рет қаралды 1 М.
Ravindra Nayak sannakkibettu songs #youtube #reels
0:55
Ravindra nayak sannakkibettu
Рет қаралды 1,7 М.
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 18 МЛН