No video

Poetry | Life | Ravindra nayak sannakkibettu | Chethan nagarala | Jayanth kumar

  Рет қаралды 947

Ravindra nayak sannakkibettu

Ravindra nayak sannakkibettu

Күн бұрын

Poetry
ಕನ್ನಡ ಕವಿತೆ
ಬೊಗಸೆ ತುಂಬುವ ಬುತ್ತಿ
ಕಾಲದ ಹಾದಿಯ ನಿರಂತರ ನಡಿಗೆಯಲ್ಲಿ
ನೆತ್ತಿಯ ಮೇಲೆ ಹೊಳೆದದ್ದು ಅದೆಷ್ಟೋ ತಾರೆ
ಬಿರು ಗಾಳಿಗೆ ಸುಡು ಬಿಸಿಲಿಗೆ
ಕಣ್ಣು ಕತ್ತಲು ಕವಿದಂತಾಗಿ
ನಡೆಯಲಾಗದೆ ನಿಂತ ಕ್ಷಣಗಳಲ್ಲಿ
ಕುಸಿಯಲು ಎಂದೂ ಬಿಟ್ಟಿಲ್ಲ ನಂಬಿ ನಿಂತ ನೆಲದೂರು.
ಏರಿದ ಏರಿಗೆ ಕೈಹಿಡಿದು
ಜಾರಿದ ಮಣ್ಣಿಗೂ ಕೈಕೊಟ್ಟವರಿಂದಲೇ
ನೆಲದ ಹಸಿರು ಇನ್ನೂ ನಳನಳಿಸುತ್ತಿದೆ.
ಬೇಸರಿಲ್ಲದ ಹಾಗೆ ಎದ್ದು ನಿಂತು
ಮತ್ತೆ ಮತ್ತೆ ನಡೆಯುವಷ್ಟು ಕಸುವೂ
ಹಾಗೆಯೇ ಉಳಿದುಕೊಂಡಿದೆ.
ಭೂಮಿ ಆಕಾಶ ಸಂಧಿಸದೇ ಉಳಿದಲ್ಲಿ
ಸದಾ ಕಣ್ಮಿಟುಕಿಸಿ ಕರೆಯುವ ಬಯಲು
ಚಲಿಸುವ ಚಕ್ರಗಳು ಮುರಿದ ಕಡೆಯಲ್ಲೆಲ್ಲಾ
ಹಾರುವ ಬಣ್ಣಬಣ್ಣದ ಚಿಟ್ಟೆಗಳ ನೆರಳು
ಹಿಡಿ ಹಿಡಿ ಎಂದು ಸವಾಲೆಸೆದು
ಮುಟ್ಟದಂತೆ ಮುಟ್ಟಿ
ಹತ್ತಿರವಾದಂತೆ ದೂರ ಸರಿದು
ಸದಾ ಸೆಳೆಯುವ ಸಂತಸದ ಹೊನಲು.
ಯಾವುದು ನಿಜ? ಯಾವುದು ಸುಳ್ಳು?
ಯಾವುದದು ಸಿಕ್ಕಿದರೆ ಸಾಕೆನ್ನಿಸುವ ಕೆಳೆಕೂಟ?
ಇಲ್ಲಿಂದಲ್ಲಿ: ಅಲ್ಲಿಂದಿಲ್ಲಿ.
ಯಾವುದದು ಮತ್ತೆ ಮರಳುವ ಹಂಬಲವನ್ನೇ
ಮರೆಸುವ ನೋಟ?
ಚಿಟ್ಟೆಯಾಗುವ ಬೆಳಕಿನಲ್ಲಿ
ಹಾದಿಯ ತುಂಬಾ
ಕೋಶವಾಗಿಯೇ ಕಾಯುವ
ನೂರು ಕನಸ ತತ್ತಿ.
ನೆಲಮುಗಿಲ ನೆನಪಳಿದು
ನಿಂತಾಗ ಸುಮ್ಮನೆ,
ಬದುಕು ನಿರಂತರ
ಬೊಗಸೆ ತುಂಬುವ ಬುತ್ತಿ.
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#viral
#poetry
#life
#kannadakavana
#kavisammelan
#millionviews
For more Ravindra nayak sannakkibettu songs:
Mucchibidu manassina ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ
• Kannada bhavageethe |M...
Gokulake hogona ಗೋಕುಲಕೆ ಹೋಗೋಣ
• Gokulake hogona ಗೋಕುಲಕ...
Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ
• Gazal |Nasheyeride nin...
Hucchu hrudaya ಹುಚ್ಚು ಹೃದಯ
• Breakup song | Hucchu ...
Yenintha naviru ಏನಿಂಥ ನವಿರು
• Yenintha naviru ಏನಿಂಥ ...
Olava shravana ಒಲವ ಶ್ರಾವಣ
• Bhavageethe| Olava shr...
ಕವಿತೆ ಹುಟ್ಟುವ ಸಮಯ
• Ravindra nayak sannakk...

Пікірлер: 14
@mallikasnayak6318
@mallikasnayak6318 Жыл бұрын
ಚೆನ್ನಾಗಿದೆ... 'ಬೊಗಸೆ ತುಂಬುವ ಬುತ್ತಿ'👌
@gururajasr6207
@gururajasr6207 Жыл бұрын
ಮನದಾಳದ ಮಾತು ಅದ್ಭುತವಾಗಿ ಮೂಡಿಬಂದಿದೆ ರವೀಂದ್ರ ಸರ್, ಭಾವನೆಗಳು ಬೋಗಸೆ ಕೈಯಲ್ಲಿನ ನೀರು ಜಾರಿದಂತೆ ಒಂದೊಂದು ಸಾಲುಗಳು ಎದೆಯೊಳಗೆ ಜಾರಿತು ಸರ್ ನಿಮ್ಮ ಅಭಿಮಾನಿ 👌👍🙏
@Vinutha2368
@Vinutha2368 Жыл бұрын
"ಬೊಗಸೆ ತುಂಬುವ ಬುತ್ತಿ" ವಾವ್ ಒಳ್ಳೆಯ ಭಾವನಾತ್ಮಕ ಕವಿತೆ ಸರ್.❤️👌👌 ತುಂಬಾ ಒಳಅರ್ಥ ಕೊಡುವ ಸುಂದರ ಕವಿತೆಯ ಸಾಲುಗಳು . ಸೊಗಸಾದ ವಾಚನ. ಅಭಿನಂದನೆಗಳು ಸರ್ 🙏🙏🙂
@prajnayanevanil8032
@prajnayanevanil8032 Жыл бұрын
ವಾwwwwww. Superrr yentha salugalu.
@PrabhaMysore
@PrabhaMysore Жыл бұрын
ಭಾವನಾತ್ಮಕ ಸಾಲುಗಳು ಸರ್, ವಾಚನವೂ ಭಾವುಕವಾಗಿಸಿತು ಸರ್🙏🙏
@narayanaganiga4990
@narayanaganiga4990 Жыл бұрын
😍
@Lachamanna.1975
@Lachamanna.1975 Жыл бұрын
ಗುರುಗಳೇ 👌
@jayakavibhavageetha7145
@jayakavibhavageetha7145 Жыл бұрын
ವಾವ್... ಸವಿಸ್ವಪ್ನಗಳ ಶುಭರಾತ್ರಿ..! ಶರಣಾರ್ಥಿ ಕವಿಗಳೆ...
@nemikasantha4420
@nemikasantha4420 Жыл бұрын
ಬಿನ್ನವಾಗಿದೆ, ವಿಶೇಷವಾಗಿದೆ, ಹೊಸತಾಗಿದೆ, ಇನ್ನಷ್ಟು ಹೇಳಲು ಪದಗಳ ಕೊರತೆಯಾಗಿದೆ.. ಮತ್ತೇ ನಿಮ್ಮ ಅಭಿಮಾನಿ
@Ravindranayaksannakkibettu
@Ravindranayaksannakkibettu Жыл бұрын
ಒಹ್ ❤ ನಿಮ್ಮ ಮೆಸೇಜ್ ನೋಡ್ಲೇ ಇಲ್ಲ. Thank you
@nemikasantha4420
@nemikasantha4420 Жыл бұрын
@@Ravindranayaksannakkibettu 🤩
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 11 МЛН
If Barbie came to life! 💝
00:37
Meow-some! Reacts
Рет қаралды 65 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 18 МЛН
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 471 М.