No video

Trending | Kannadi ಕನ್ನಡಿ | Mirror | Poetry | Ravindra nayak sannakkibettu

  Рет қаралды 1,149

Ravindra nayak sannakkibettu

Ravindra nayak sannakkibettu

Күн бұрын

Kannada
ಕನ್ನಡಿ
Poetry
ಇತ್ತೀಚೆಗೆ ಯಾಕೋ ಗೊತ್ತಿಲ್ಲ
ಕನ್ನಡಿಯ ಎದುರು ನಿಲ್ಲುವಾಗೆಲ್ಲಾ
ಗಲಿಬಿಲಿಗೊಳ್ಳುತ್ತೇನೆ,
ಅಲ್ಲಿ ಕಾಣುವ ನನ್ನದಲ್ಲದ ಬಿಂಬ
ಸಿಡುಕು ಮುಖ;ನಗುವಿಲ್ಲದ ಗೆರೆಗಳು
ಗಾಯದ ಕಲೆಗಳು;ಚಂಚಲ ಕಣ್ಣುಗಳಲ್ಲಿ
ನನ್ನನ್ನು ಕಾಣದೇ ಹತಾಶೆಗೊಳ್ಳುತ್ತೇನೆ.
ನಾನು ಕಂಡ ರೂಪ ಯಾರದ್ದು?
ಹೊರಗೆ ನಿಂತಿರುವ
ನಾನು ಯಾರು?
ಅದು ನಾನಲ್ಲ; ನಾನೆ?
ಅಥವಾ
ಮುಖವಾಡಗಳ ಮೊರೆಹೋಗಿದ್ದೇನಾ?
ಬರಿಯ ಪ್ರಶ್ನೆಗಳು.
ಬದುಕಿನಲ್ಲಿ ಕಳೆದುಹೋಗಿ
ಬಯಲನ್ನು ಮರೆತ
ನನ್ನ ಪರಿಚಯವೇ ನನಗಿಲ್ಲ.
ಇನ್ನು ಲೋಕಕ್ಕೆ ಹೇಗೆ ಹೇಳಲಿ
ನನ್ನ ಬಗ್ಗೆ?
ನೀರಿನಲ್ಲಿ ಕಲಸಿ ಹೋದ
ನೂರು ಬಣ್ಣಗಳಲ್ಲಿ
ನನ್ನ ಮೂಲ ಯಾವುದು?
ಜರಡಿಯಲ್ಲಿ ಸೋಸಿದರೂ
ಬಣ್ಣದ ನೀರು ಸೋರಿ ಹೋಗುತ್ತಿದೆ.
ಲೋಕದ ಕಣ್ಣಿನಲ್ಲಿ
ನನ್ನನ್ನು ನೋಡಿ ಸುಸ್ತಾಗಿ ಹೋಗಿದ್ದೇನೆ;
ಸರಿಗಳ ಸಿದ್ಧ ಮಾದರಿಗಳಿಗೆ
ಹಲವು ಬಾರಿ
ರೂಪಾಂತರಗೊಂಡಿದ್ದೇನೆ.
ನನ್ನನ್ನು ಕಾಣಲು
ಮನೆಯಲ್ಲಿನ ಕನ್ನಡಿ ಸಾಲುತ್ತಿಲ್ಲ;
ಲೋಕದ ಕಣ್ಣಿನ ಪೊರೆ ಸರಿಸಿ
ನನ್ನೊಳಗನ್ನು ತೋರಿಸುವ
ಕನ್ನಡಿ ಇಲ್ಲಿ ಸಿಗುತ್ತಿಲ್ಲ.
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#poetry
#kannadakavanagalu
#mirror

Пікірлер: 20
@mallikasnayak6318
@mallikasnayak6318 2 жыл бұрын
ಚೆನ್ನಾಗಿತ್ತು. ಗೊಂದಲ, ನೋವು, ಹತಾಶೆ ತುಂಬಿದ ' ಕನ್ನಡಿ ' .
@vanishreek.gurumurthy6119
@vanishreek.gurumurthy6119 Жыл бұрын
ನನ್ನ ಮನದ ಮಾತುಗಳನ್ನು ನೀವು ಹೇಳಿದಂತಿದೆ..... ಭಾವನಾತ್ಮಕವಾದ ಅರ್ಥಗರ್ಭಿತ ಪದಗಳು ❤
@prabhurajgpatil808
@prabhurajgpatil808 2 жыл бұрын
🙏🙏💐
@deshpandegunderao7597
@deshpandegunderao7597 2 жыл бұрын
👌👌👌
@nemikasantha4420
@nemikasantha4420 2 жыл бұрын
ನಿಮ್ಮ ಬರವಣಿಗೆಯೇ ಬಿನ್ನ ಪ್ರತೀ ಬಾರಿಯೂ ನಿಮ್ಮ ಬರವಣಿಗೆಗೆ ಈ ಮನವು ಸೋಲುತ್ತಿದೆ ನಿಮ್ಮ ಸಾಹಿತ್ಯದ ಅಭಿಮಾನಿಗಳು ಕಾರಣಗಳನ್ನು ನೀಡುತ್ತಿದೆ
@Ravindranayaksannakkibettu
@Ravindranayaksannakkibettu 2 жыл бұрын
ಈ ಪ್ರೀತಿಗೆ ಅದರ ರೀತಿಗೆ 🙏💐❤
@manjulasanath4239
@manjulasanath4239 2 жыл бұрын
ಚಂದ
@veenarajesh7625
@veenarajesh7625 2 жыл бұрын
Beautiful composition
@kallappagudadur399
@kallappagudadur399 2 жыл бұрын
ಅದ್ಬುತ ಸರ್
@Vinutha2368
@Vinutha2368 Жыл бұрын
ವಾವ್.....ಅಧ್ಬುತ ಸಾಲುಗಳು 👌👌ಸುಂದರ ಆತ್ಮಾಲೋಕನ. ವಾಚನವು ಅಷ್ಟೇ ಸೊಗಸಾಗಿದೆ. ನಿಮ್ಮ ಕವನ ಹೃದಯದ ಕದವನ್ನು ತಟ್ಟಿದೆ. ❤️👌👌👌👌👌 ಶುಭೋದಯ,.🙏.ನಿಮ್ಮ ಅಧ್ಭುತ ರಚನೆಗೆ ಅಭಿನಂದನೆಗಳು🙏🙏🙏
@nayanapoojari2936
@nayanapoojari2936 Жыл бұрын
ಚಂದ 💐🥰
@anantvaidyayellapur
@anantvaidyayellapur 2 жыл бұрын
Fine
@sanju_see5302
@sanju_see5302 2 жыл бұрын
👍
@Lachamanna.1975
@Lachamanna.1975 2 жыл бұрын
👌 ಸರ್
@Rajactor4u
@Rajactor4u 2 жыл бұрын
Good
@sandhyanayak6821
@sandhyanayak6821 2 жыл бұрын
Super
@gururajasr6207
@gururajasr6207 2 жыл бұрын
ಅಮೋಘ ಅರ್ಥಗರ್ಭಿತ ಆತ್ಮಾವಲೋಕನ ರವೀಂದ್ರ ಸರ್ ನಿಮ್ಮ ಅಭಿಮಾನಿ 👌👌👍👍🙏🙏
@maheshparkala417
@maheshparkala417 2 жыл бұрын
Nice dear
@shrinivasanayakbhavageethe9199
@shrinivasanayakbhavageethe9199 2 жыл бұрын
ತುಂಬಾ ಚಂದದ ಕವನ, ಆತ್ಮಾವಲೋಕನ 👌👌
@madhupatil-uh6fe
@madhupatil-uh6fe 2 жыл бұрын
Exllent sir super👌👌
The Joker saves Harley Quinn from drowning!#joker  #shorts
00:34
Untitled Joker
Рет қаралды 64 МЛН
Schoolboy Runaway в реальной жизни🤣@onLI_gAmeS
00:31
МишАня
Рет қаралды 2,2 МЛН
WHO CAN RUN FASTER?
00:23
Zhong
Рет қаралды 42 МЛН
The Giant sleep in the town 👹🛏️🏡
00:24
Construction Site
Рет қаралды 19 МЛН
Kannada Standup Comedy | Pramod Ashnal | Mundina Nildana : Whitefield
7:51
The Joker saves Harley Quinn from drowning!#joker  #shorts
00:34
Untitled Joker
Рет қаралды 64 МЛН