ಅಗ್ನಿದಿವ್ಯ Agnidivya | Ravindra Nayak Sannakkibettu

  Рет қаралды 934

Ravindra nayak sannakkibettu

Ravindra nayak sannakkibettu

Күн бұрын

Poetry
ಅಗ್ನಿದಿವ್ಯ
ಉರಿಯಲು ಸಿದ್ಧವಾಗಿ ಕಿಡಿಯನ್ನಷ್ಟೇ
ಪಡೆಯಲು ಹಾತೊರೆಯುವವರ ನಡುವೆ,
ಒಡಲಲ್ಲಿ ಬೆಂಕಿಯನ್ನಿಟ್ಟುಕೊ‌ಂಡು
ಬಾಳುವುದಾದರೂ ಹೇಗೆ?
ಎಷ್ಟು ಮೌನ ಸುರಿದರೂ
ಎಷ್ಟು ದೂರ ಉಳಿದರೂ
ತಪ್ಪಿ ಬಂದ ಒಂದು ಮಾತು ಸಾಕು;
ಯುದ್ಧ ಸಾರುವ ಶಂಖಾನಾದದಂತೆ.
ಹೊರಟ ರಣೋತ್ಸಾಹದಲ್ಲಿ ಶಾಂತಿ ಮಂತ್ರ ಕೇಳುವುದಾದರೂ ಹೇಗೆ?
ಎಷ್ಟೋ ಯುಗಗಳಿಂದ ಕಾದಂತೆ,
ಮನಸ್ಸು ಬೆಂಕಿ ಕಂಡ ಪತಂಗ!
ಸಿಡಿದ ಕಿಡಿ;ಹೊತ್ತಿಕೊಂಡ ಬೆಂಕಿ
ಸೆಳೆವ,ಬಳುಕುವ ಜ್ವಾಲೆಯಲ್ಲಿ
ಉರಿಯುವ ಉರಿಸುವ ಹುಮ್ಮಸ್ಸು.
ಸುರಿಯುವ ಮಳೆಯಲ್ಲಿ ಕುಣಿಯುವ
ಮಕ್ಕಳ ಹಾಗೆ; ಸಂತೃಪ್ತ!
ಬೆಂಕಿ ಬೆಂಕಿಯೊಂದಿಗೇ ಬೆರೆಯಿತು;
ಬದುಕಿ ಕಣ್ಣೆದುರಿಗಿದ್ದದ್ದು ನೆಪ‌ಮಾತ್ರ!
ನಡುವೆಲ್ಲೋ ತಣ್ಣಗೆ ಬದುಕುವ,
ಬರಡು ಭೂಮಿಯಲ್ಲೂ ಹಸಿರು ಹುಡುಕುವ
ನಾಳೆಯ ನಂಬಿಕೆ ಉಳಿಸಿಕೊಂಡ ಕನಸು ಕಣ್ಣು!
ಕತ್ತಲು ಕಳೆದು ಬೆಳಕು ಹರಿಯುವ ಮುನ್ನ
ಲೋಕದ ಕಿಚ್ಚು ಒಡಲು ಸೇರುವ ಮುನ್ನ;
ಸುತ್ತಲೂ ಹೊತ್ತಿ ಉರಿಯುತ್ತಿರುವ
ಉನ್ಮಾದ ಬೆಂಕಿಯ ಕೆನ್ನಾಲಗೆಗೆ
ಸುಟ್ಟುಹೋಗದಂತೆ ಮತ್ತೆ ಮತ್ತೆ
ಬದುಕ ತಡೆಯುವುದಾದರೂ ಹೇಗೆ?
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#lovepoetry

Пікірлер: 15
@sukanyanayak542
@sukanyanayak542 2 жыл бұрын
odalalli benki ittukondu badukalu saadhyaavilla.....aadaru baduka beku......nice lines....Tamasoma jyothirgamaya.....
@gururajasr6207
@gururajasr6207 2 жыл бұрын
ಬೆಂಕಿಯ ಜ್ವಾಲೆಯ ಮೇಲಿರುವ ಬಾಣಲೆಯಂತಾಗಿದೆ ಬದುಕು.. ವಿಶಿಷ್ಟವಾಗಿದೆ ರವೀಂದ್ರ ಸರ್ ನಿಮ್ಮಭಿಮಾನಿ.. 💐❣️🙏
@yeshwarajkulal4082
@yeshwarajkulal4082 2 жыл бұрын
,👌👌
@Lachamanna.1975
@Lachamanna.1975 2 жыл бұрын
ಸೂಪರ್ ಸರ್......
@rpraghothama1990
@rpraghothama1990 2 жыл бұрын
ಸೊಗಸಾಗಿದೆ ಸರ್
@sanju_see5302
@sanju_see5302 2 жыл бұрын
👌👌
@vanishreek.gurumurthy6119
@vanishreek.gurumurthy6119 Жыл бұрын
ಅಗ್ನಿದಿವ್ಯ... ಕವಿತೆಯ ಹೆಸರೇ ಸುಂದರ.... ಅದರಲ್ಲಿನ ಪ್ರತಿ ಸಾಲುಗಳು ಅತ್ಯಂತ ಅರ್ಥಪೂರ್ಣ❤❤❤❤
@Ravindranayaksannakkibettu
@Ravindranayaksannakkibettu 4 ай бұрын
ಥ್ಯಾಂಕ್ಯೂ❤️❤️❤️
@shrinivasanayakbhavageethe9199
@shrinivasanayakbhavageethe9199 2 жыл бұрын
ತುಂಬಾ ಚಂದದ ಕವನ ರವಿ 👌👌
@Chandrika12347
@Chandrika12347 2 жыл бұрын
ಸುಪರ್
@nemikasantha4420
@nemikasantha4420 Жыл бұрын
ವಾಚನದ ಶೈಲಿ ಅದ್ಭುತ.. ಬರವಣಿಗೆಯಂತೂ ಬೇರೆಯೇ ಹಂತ.. ಸ್ಪಷ್ಟ ಕಂಠ.. ಅರ್ಥಗರ್ಪಿತ ಕವನ ಮಗದೊಮ್ಮೆ ಅಭಿಮಾನಿಯಾದೆ ನಿಮ್ಮ ಬರವಣಿಗೆಗೆ
@Ravindranayaksannakkibettu
@Ravindranayaksannakkibettu Жыл бұрын
ಇವತ್ತು ಇನ್ನೊಂದಷ್ಟು ಕವಿತೆಗಳಿಗೆ ದನಿಯಾಗ್ಬೇಕು...ನಿಮ್ಮ ಈ ಪ್ರತಿಕ್ರಿಯೆಯ ಸ್ಫೂರ್ತಿಯಲ್ಲಿ. ಹೀಗೆಯೇ ನನ್ನ ಬೆನ್ನುತಟ್ಟುತ್ತಾ ಇರಿ ❤
@nemikasantha4420
@nemikasantha4420 Жыл бұрын
@@Ravindranayaksannakkibettu ಅದರ ಬಿಡುಗಡೆಯ ಕ್ಷಣಕ್ಕೆ ಕಾಯುತ್ತಿರುತ್ತೇನೆ ಮತ್ತೇ ನಿಮ್ಮ ದನಿ ಕೇಳಲು
@dhruvanayak9635
@dhruvanayak9635 2 жыл бұрын
Wah!
@prabhavathiacharya4979
@prabhavathiacharya4979 2 жыл бұрын
Wow supper sir
КАКУЮ ДВЕРЬ ВЫБРАТЬ? 😂 #Shorts
00:45
НУБАСТЕР
Рет қаралды 3 МЛН
ಅಮ್ಮ
0:48
Ravindra nayak sannakkibettu
Рет қаралды 460
Adil - Қызым | Official Music Video
3:39
Adil
Рет қаралды 350 М.
BYTANAT - ҚЫЗҒАЛДАҒЫМ
2:24
BYTANAT
Рет қаралды 1,9 МЛН
Нұрмахан - Уақыт
3:32
Nurmakhan
Рет қаралды 84 М.
Shiza , Bakr - TER (Lyrics Video)
3:03
SHIZA
Рет қаралды 117 М.