No video

ಬೂದಿಯಾಗಿದ್ದೇನೆ| ಕನ್ನಡ ಕವಿತೆ |POETRY| RAVINDRA NAYAK SANNAKKIBETTU| KANNADA POETRY |HOPE |MOTIVATION

  Рет қаралды 2,178

Ravindra nayak sannakkibettu

Ravindra nayak sannakkibettu

Күн бұрын

ಕನ್ನಡ ಕವಿತೆ
ಬೂದಿಯಾಗಿದ್ದೇನೆ. ನಿಜ,
ಕಿಡಿಗಳನ್ನು ಇನ್ನೂ ಉಳಿಸಿಕೊಂಡಿದ್ದೇನೆ.
ನಿಗಿನಿಗಿ ಹೊಳೆಯದೆ ಕೆಂಡ,
ಏನನ್ನೂ ನಂಬುವುದಿಲ್ಲ ಜಗತ್ತು.
ಗಾಳಿ ಬೀಸಲಿ ಒಮ್ಮೆ
ಧಗಧಗನೆ ಉರಿಯುವ ಕಲೆಯನ್ನು
ನಾನಿನ್ನೂ ಮರೆತಿಲ್ಲ.
ಕಟ್ಟುವುದು ನನಗೇನೂ ಹೊಸದಲ್ಲ ಬಿಡು
ಒಮ್ಮೆ ನೋವು
ಒಮ್ಮೆ ಹೂವು
ಮಾಲೆಯಾದ ಯಾವುದನ್ನೂ ನಾನು ಇಟ್ಟುಕೊಂಡಿಲ್ಲ.
ಕತ್ತಿ ಕೊರಳಿನ ನಡುವೆ
ದೇವರು ಪ್ರತ್ಯಕ್ಷನಾಗಲು ಎಷ್ಟು ಹೊತ್ತು?
ನಾನಿನ್ನೂ ತಪಸ್ಸು ಬಿಟ್ಟು ಎದ್ದಿಲ್ಲ.
ಕಣ್ಣು ಬಿಟ್ಟಿಲ್ಲ.
ಇಷ್ಟು ದೂರ ಕರೆದು ಬಂದ ದಾರಿಯನ್ನು
ಇನ್ನೂ ಅಪ್ಪಿಕೊಂಡಿದ್ದೇನೆ.
ಕಲ್ಲು ಮುಳ್ಳುಗಳಿಗೆ ಹೆದರಿ
ನಾನಿನ್ನೂ ಕಾಲು ಕಿತ್ತಿಲ್ಲ.
ಯಾರದ್ದೋ ಗೆಲುವಿನ ಸುದ್ದಿಯಿಂದ
ನನ್ನನ್ನು ವಿಚಲಿತಗೊಳಿಸುವ ಹುನ್ನಾರವೇ?
ನನ್ನ ಗುರಿ ನನ್ನನ್ನೇ ಹುಡುಕಿಕೊಂಡಾಗ
ನಾನಿನ್ನು ರಸ್ತೆಗೇ ಇಳಿದಿರಲಿಲ್ಲ.
ಸ್ಪರ್ಧೆಗೆ ನಿಲ್ಲುವುದನ್ನು
ಯಾವತ್ತೋ ಬಿಟ್ಟು ಬಿಟ್ಟಿದ್ದೇನೆ.
ನಡೆಯಲು ಕಲಿತಿದ್ದೇನೆ.
ಚಿಪ್ಪಿನಲ್ಲಿ ಬಿದ್ದ ಹನಿಗಳಿಗೆಲ್ಲಾ
ಮುತ್ತಾಗುವ ಯೋಗವಿರುವುದಿಲ್ಲ.
ಮೌನದ ಬೀಜ ಮಣ್ಣೊಳಗೇ
ಬಿರಿಯುವ ಸದ್ದು;
ಕಾಯದೇ ಬೆಳಕಾಗುವುದಿಲ್ಲ.
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#poetry #reels
#motivation
For more Ravindra nayak sannakkibettu songs:
Nooru novina naduve ನೂರು ನೋವಿನ ನಡುವೆ
• ನೂರು ನೋವಿನ ನಡುವೆ |Noor...
Gokulake hogona ಗೋಕುಲಕೆ ಹೋಗೋಣ
• Gokulake hogona ಗೋಕುಲಕ...
Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ
• Gazal |Nasheyeride nin...
Hucchu hrudaya ಹುಚ್ಚು ಹೃದಯ
• Breakup song | Hucchu ...
Yenintha naviru ಏನಿಂಥ ನವಿರು
• Yenintha naviru ಏನಿಂಥ ...
Olava shravana ಒಲವ ಶ್ರಾವಣ
• Bhavageethe| Olava shr...
ಕವಿತೆ ಹುಟ್ಟುವ ಸಮಯ
• Ravindra nayak sannakk...

Пікірлер: 45
@sangupatil965
@sangupatil965 23 күн бұрын
ಅದೇಷ್ಟೋ ಬಾರಿ... ನಮ್ಮನ್ನು ನಿಮ್ಮ ಸಾಹಿತ್ಯದ ಮೂಲಕ ನಮ್ಮನ್ನು ಕಟ್ಟಿ ಹಾಕುತ್ತಿರಾ. ರಾಘವೇಂದ್ರ ಸರ್
@janakik9015
@janakik9015 Жыл бұрын
Waaaw, tumbaa artavattada saalugalu, tumbaa chennagide
@Ravindranayaksannakkibettu
@Ravindranayaksannakkibettu 5 ай бұрын
Thank you ❤️
@dr.k.n.lavanyaprabha6464
@dr.k.n.lavanyaprabha6464 Жыл бұрын
ತುಂಬಾ ಚೆನ್ನಾಗಿದೆ ಕವಿತೆ ಮತ್ತು ವಾಚನ
@Ravindranayaksannakkibettu
@Ravindranayaksannakkibettu 5 ай бұрын
Thank you ❤️
@nayanapoojari2936
@nayanapoojari2936 6 ай бұрын
ಸರ್ 🙏🏻 ತುಂಬಾ ಅದ್ಭುತವಾದ ಸಾಲುಗಳು ಸರ್... ವಾಚನ ಕೂಡ ಅಷ್ಟೇ ಚನ್ನಾಗಿದೆ... 💐💐
@Ravindranayaksannakkibettu
@Ravindranayaksannakkibettu 6 ай бұрын
ತುಂಬಾ ತುಂಬಾ ಥ್ಯಾಂಕ್ಯೂ❤️❤️❤️
@Ravindranayaksannakkibettu
@Ravindranayaksannakkibettu 6 ай бұрын
ತುಂಬಾ ತುಂಬಾ ಥ್ಯಾಂಕ್ಯೂ❤️❤️❤️
@simplicityisstyle4053
@simplicityisstyle4053 4 ай бұрын
ಈ ಸಾಲುಗಳೇ ನನ್ನ ಜೀವನಾರ್ಥ ಹೇಳಿದ ಹಾಗಿದೆ ...ನನ್ನೊಳಗೆ ಅಡಗಿದ ಮೌನದ ಕೊರಗಿಗೆ ನೀವು ಅಕ್ಷರ ರೂಪ ಕೊಟ್ಟಂತೆ ನನಗೆ ಭಾಸವಾಗುತ್ತದೆ.... ಹೇಳಿದೆ ಉಳಿದ ಅದೆಷ್ಟೋ ಭಾವಗಳಿಗೆ ನೀವು ಧ್ವನಿಯಾಗಿದ್ದೀರಿ ಅನಿಸಿದಂತಿದೆ...😔😊
@Ravindranayaksannakkibettu
@Ravindranayaksannakkibettu 4 ай бұрын
ಎಲ್ಲವನ್ನೂ ಹೇಳುವುದು ಕಷ್ಟ, ಹಾಗಂತ ಸುಮ್ಮನಿರುವುದೂ ಕಷ್ಟ. ಅಂತಹುದೇ ಹಲವು ಭಾವಗಳು ಒಟ್ಟಾಗಿ ಅದುಮಿಡಲಾಗದೇ ಕವಿತೆಯಾಗಿದೆ. ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ❤️
@simplicityisstyle4053
@simplicityisstyle4053 4 ай бұрын
@@Ravindranayaksannakkibettu ಅಬ್ಬಾ ನಿಮ್ಮಿಂದ reply... ತುಂಬಾ ಖುಷಿ ಆಯಿತು ಸರ್... ತುಂಬಾ ತುಂಬಾ ಧನ್ಯವಾದಗಳು ಸರ್...🙏🙏
@Ravindranayaksannakkibettu
@Ravindranayaksannakkibettu 4 ай бұрын
@@simplicityisstyle4053 ನೂರು ನೋವಿನ ನಡುವೆ ಒಂದು ನಗೆಯು ಕಾಡಿ kzfaq.info/get/bejne/m7d9icto08Dbc4k.htmlsi=bnnOgN9abZO7PqZl
@simplicityisstyle4053
@simplicityisstyle4053 4 ай бұрын
@@Ravindranayaksannakkibettu ಸರ್ ನಿಮ್ಮ youtube channel subscriber ನಾನು.. ನಿಮ್ಮ ಎಲ್ಲ ಭಾವಗೀತೆ, ಕವಿತೆಗಳ ವಿಡಿಯೋ ಗಳನ್ನ ನೋಡಿದಿನಿ..."ನೂರು ನೋವಿನ ನಡುವೆ" ಕೂಡ ....,ಭಾವನೆಗಳ ಊರಿನಲ್ಲಿ ಅಕ್ಷರಗಳ ಜಾತ್ರೆಗೆ ಹೋದ ನಿಮಗೆ... ಇನ್ನಷ್ಟು ಮತ್ತಷ್ಟು ಭಾವಗುಚ್ಛಗಳು.... ಪದಪುಂಜಗಳು ದೊರೆತು ನಮ್ಮಂತ ಕವನಪ್ರಿಯರಿಗೆ ಮತ್ತಷ್ಟು ಮುದವೆನಿಸುವ ಭಾವಗಳು ನಿಮ್ಮಿಂದ ಬರಲಿ ಎಂದು ಆಶಿಸುತ್ತೇನೆ... 🙏🙏 ಸದಾ ನಿಮ್ಮ ಕವಿತೆಗಳಿಗೆ ಕಾಯುವ ದೂರದೂರಿನ ಅಭಿಮಾನಿ...🙏🙏
@simplicityisstyle4053
@simplicityisstyle4053 4 ай бұрын
@@Ravindranayaksannakkibettu ಕೇಳಿದಿನಿ ಸರ್... ನೋಡಿದಿನಿ... ಇದು ನನ್ನ ಬಹಳ ಪ್ರಿಯವಾದ ಭಾವಗೀತೆಗಳಲ್ಲಿ ಒಂದು...,ಸರ್ ನಿಮ್ಮ youtube channel ನ subscriber ನಾನು ..,ನಿಮ್ಮ ವಿಡೀಯೋಗಳನ್ನ ನೋಡ್ತಿರ್ತೀನಿ...ಭಾವಗಳಿಗೆ ಅಕ್ಷರ ರೂಪ ಕೊಡುವ ನಿಮ್ಮ ಬರವಣಿಗೆ ನನಗೆ ತುಂಬಾ ಇಷ್ಟ.... ಸಾಹಿತ್ಯ ಲೋಕದಲ್ಲಿ ..ಭಾವನೆಗಳ ಊರಿನಲ್ಲಿ.. ಅಕ್ಷರ ಗಳ ಜಾತ್ರೆಯಲ್ಲಿ ಸಂತೆ ನಡೆಸಿರುವ ನಿಮ್ಮ ಈ ಪಯಣಕ್ಕೆ ತುಂಬು ಹೃದಯದ ಶುಭಹಾರೈಕೆಗಳು...💐💐ನಿಮ್ಮಿಂದ ಇನ್ನಷ್ಟು ಮತ್ತಷ್ಟು ಮನತಣಿಸುವ ಭಾವಗೀತೆಗಳು ಹೊರ ಬರಲಿ.. ಎಂದು ಆಶಿಸುವ ದೂರದ ಊರಿನ ಅಭಿಮಾನಿ ನಾನು....🙏🙏🙏🙏🙏
@jayakavibhavageetha7145
@jayakavibhavageetha7145 Жыл бұрын
ವಾವ್... ಒಳ್ಳೆಯ ಕವಿತೆ ಕವಿಗಳೆ..! ಆತ್ಮಪೂರ್ವಕ ಅಭಿನಂದನೆಗಳು...
@Ravindranayaksannakkibettu
@Ravindranayaksannakkibettu 5 ай бұрын
ಧನ್ಯವಾದ ಕವಿಗಳೇ🙏
@janakik9015
@janakik9015 Жыл бұрын
Endiguu mareyalaaga saalugalu
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಥ್ಯಾಂಕ್ಯೂ❤️
@deepapavanje2429
@deepapavanje2429 Жыл бұрын
ಸೊಗಸಾದ ಕವಿತೆ... ಕಾಯುವಿಕೆಗಿಂತ ಅನ್ಯ ತಪವು ಇಲ್ಲ.❤👌👌
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಥ್ಯಾಂಕ್ಸು💐
@mallikasnayak6318
@mallikasnayak6318 Жыл бұрын
ಆಳವಾಗಿದೆ ಅಂತರಂಗದ ಕವಿತೆ...👌🙏 ಇಷ್ಟದ ಕವಿತೆ.. ಮೌನದ ಬೀಜ ಮಣ್ಣಿನೊಳಗೇ ಬಿರಿಯುವ ಸದ್ದು...❤️
@Ravindranayaksannakkibettu
@Ravindranayaksannakkibettu 5 ай бұрын
ನಿಮ್ಮ ಪ್ರತಿಕ್ರಿಯೇ ಯಾವತ್ತೂ ಸ್ಪೆಶಲ್❤️
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಸೊಗಸಾದ ಕವಿತೆ. ಚಿಂತನೆಗೆ ಹಚ್ಚುವಂತದ್ದು 👌👌
@Ravindranayaksannakkibettu
@Ravindranayaksannakkibettu 5 ай бұрын
Thank u❤️
@Lachamanna.1975
@Lachamanna.1975 Жыл бұрын
ಗುರುಗಳೇ 🙏
@vaninayakparkala5227
@vaninayakparkala5227 Жыл бұрын
ಚೆನ್ನಾಗಿದೆ ಕವಿತೆ ಅಣ್ಣ ❤
@Ravindranayaksannakkibettu
@Ravindranayaksannakkibettu 5 ай бұрын
Thank you sister ❤️
@vanishreek.gurumurthy6119
@vanishreek.gurumurthy6119 Жыл бұрын
ಚಿಪ್ಪಿನಲ್ಲಿ ಬಿದ್ದ ಹನಿಗಳಿಗೆಲ್ಲ ಮುತ್ತಾಗುವ ಯೋಗವಿರುವುದಿಲ್ಲ.... ಎಷ್ಟು ಸುಂದರ ಸಾಲುಗಳು ಹಾಗೂ ವಾಚನ ❤❤
@Ravindranayaksannakkibettu
@Ravindranayaksannakkibettu 5 ай бұрын
ಖುಷಿ ನಿಮ್ಮ ಪ್ರತಿಕ್ರಿಯೆ ❤️
@vanishreek.gurumurthy6119
@vanishreek.gurumurthy6119 5 ай бұрын
ಇಷ್ಟು ಕೆಲಸದ ನಡುವೆಯೂ ಪ್ರತಿಕ್ರಿಯೆ ನೀಡಲು ಸಮಯ ನೀಡುತ್ತಿದ್ದೀರಿ...ಧನ್ಯವಾದಗಳು ರವೀಂದ್ರ ಸರ್​❤❤@@Ravindranayaksannakkibettu
@gururajasr6207
@gururajasr6207 Жыл бұрын
ಚಿಪ್ಪಿನಲ್ಲಿ ಬಿದ್ದ ಹನಿಗಳಿಗೆಲ್ಲ ಮುತ್ತಾಗುವ ಯೋಗವಿರುವುದಿಲ್ಲ,,👌 ಮೌನದ ಬೀಜ ಮಣ್ಣೊಳಗೆ ಬಿರಿಯುವ ಸದ್ದು ಕಾಯದೇ ಬೆಳಕಾಗುವುದಿಲ್ಲ,,,,👌 ಅದ್ಭುತವಾದ ಸಾಹಿತ್ಯ ಮತ್ತು ವಾಚನ ರವೀಂದ್ರ ಸರ್👏👏👌👌💖💖🌹🌹🙏🙏 ನಿಮ್ಮ ಅಭಿಮಾನಿ,,,❤
@Ravindranayaksannakkibettu
@Ravindranayaksannakkibettu 5 ай бұрын
ಗುರುಗಳೇ❤️
@Vinutha2368
@Vinutha2368 Жыл бұрын
ವ್ಹಾವ್.... ತುಂಬಾ ಚೆಂದದ ಅಧ್ಬುತ ಕವಿತೆಯ ಸಾಲುಗಳು ❤ನಿಜ," ಚಿಪ್ಪಿನೊಳಗೆ ಬಿದ್ದ ಹನಿಗಳೆಲ್ಲ ಮುತ್ತಾಗುವುದಿಲ್ಲ.😌 ಮನದಲ್ಲಿಯೇ ಎಲ್ಲಾ ಮೌನವಾಗಿ ಉಳಿದುಬಿಡುತ್ತದೆ.😌"ಒಳ್ಳೆಯ ಭಾವಾರ್ಥ ತುಂಬಿದೆ ಕವಿತೆಯಲ್ಲಿ . ನಿಮ್ಮ ವಾಚನವು ಅಷ್ಟೇ ಸೊಗಸು.❤️👌👌👌TQ. Sir🙂
@Ravindranayaksannakkibettu
@Ravindranayaksannakkibettu 5 ай бұрын
ಏನೆನ್ನಲಿ ಈ ಪ್ರೀತಿಗೆ❤️❤️❤️
@Vinutha2368
@Vinutha2368 5 ай бұрын
@@Ravindranayaksannakkibettu 🙏😊
@vinayakabkannada7697
@vinayakabkannada7697 Жыл бұрын
ಸೂಪರ್ ಗುರುಗಳೇ
@Ravindranayaksannakkibettu
@Ravindranayaksannakkibettu 5 ай бұрын
ಧನ್ಯಾವಾದ❤️
@pradeepshetty4890
@pradeepshetty4890 Жыл бұрын
👌👌😍😍😍
@Ravindranayaksannakkibettu
@Ravindranayaksannakkibettu 5 ай бұрын
Thank you ❤️
@ramalingegowda7432
@ramalingegowda7432 Жыл бұрын
👌👌👌
@Ravindranayaksannakkibettu
@Ravindranayaksannakkibettu 5 ай бұрын
Thank you ❤️
@raikar1198
@raikar1198 11 ай бұрын
Sir nange kavite bareyabeku kavana baribeku anta tumba ase but clearness gottagtilla adakke enadru classes idya?
@Ravindranayaksannakkibettu
@Ravindranayaksannakkibettu 11 ай бұрын
9900584495 ನನ್ನ ನಂ Contact ಮಾಡಿ ನನಗೆ ಗೊತ್ತಿರುವ ವಿಷಯ ಹೇಳ್ತೇನೆ
Алексей Щербаков разнес ВДВшников
00:47
ПОМОГЛА НАЗЫВАЕТСЯ😂
00:20
Chapitosiki
Рет қаралды 28 МЛН
а ты любишь париться?
00:41
KATYA KLON LIFE
Рет қаралды 2,9 МЛН
КТО ЛЮБИТ ГРИБЫ?? #shorts
00:24
Паша Осадчий
Рет қаралды 739 М.
ದೈನಂದಿನ ವಾಚನಗಳು ಆಗಸ್ಟ್ 7
3:58
ದೈನಂದಿನ ವಾಚನಗಳು ಆಗಸ್ಟ್ 9
3:26
Алексей Щербаков разнес ВДВшников
00:47