No video

Poetry Kannada | olavigentaha lekkachara? | ಒಲವಿಗೆಂತಹ ಲೆಕ್ಕಾಚಾರ ? | Ravindra Nayak sannakkibettu

  Рет қаралды 1,603

Ravindra nayak sannakkibettu

Ravindra nayak sannakkibettu

Күн бұрын

Poetry Kannada | olavigentaha lekkachara? | ಒಲವಿಗೆಂತಹ ಲೆಕ್ಕಾಚಾರ | Ravindra Nayak sannakkibettu
ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸಂಕಲನ: ಜಯಂತ್ ಕುಮಾರ್
ನಿನ್ನ ಸೂಕ್ಷ್ಮನೋಟಕ್ಕೆ ಸಿಕ್ಕಿಕೊಳ್ಳುವ
ಅಸೂಕ್ಷ್ಮ ವಿವರಗಳು
ಬಂಧದ ಹದ ತಪ್ಪಿಸುತ್ತಿದೆ
ತುಸುವೇ ನಿಧಾನಿಸು
ಕಡಲು ಸುಮ್ಮನೆ ಉಕ್ಕುವುದಿಲ್ಲ
ಒಲವ ಹುಣ್ಣಿಮೆಯಿಲ್ಲದೆ.
ಮಳೆಯ ಹನಿಗಳಷ್ಟೇ ಬೆಸೆಯುತ್ತಿಲ್ಲ
ಬಾನು ಭುವಿಯನ್ನು.
ಒಮ್ಮೆ ಕಣ್ಣುಬಿಟ್ಟು ನೋಡು
ಬೆಳಕಿಗೂ ಪಾಲಿದೆ ಅಲ್ಲಿ.
ಸಿಕ್ಕುಗಳಿಂದ ಬಿಡಿಸಿಕೊಂಡಷ್ಟೂ
ಒಂಟಿಯಾಗುತ್ತಿದೆ ನೂಲು
ಬಟ್ಟೆಯಾಗದೆ ಉಳಿಯುವಷ್ಟೂ
ಸೋಲುತ್ತಿದೆ ಅದರ ನಿಲುವು.
ಅದೆಷ್ಟು ಬಿರುಕುಗಳನ್ನು
ಒಡಲಲ್ಲಿ ಬಚ್ಚಿಟ್ಟುಕೊಂಡು
ಮಡಕೆಯಾಗುತ್ತಿಲ್ಲ ಹಸಿಮಣ್ಣು?
ಜೊತೆಗಿರುವಷ್ಟು ಹೊತ್ತು
ನನ್ನನ್ನು ನಾನು ಕಳೆದುಕೊಳ್ಳುತ್ತೇನೆ.
ಮುಚ್ಚಿಕೊಳ್ಳಲಿ ಜಗದ ಬಾಗಿಲು
ನಿನ್ನಲ್ಲಿ ನಾನು ತೆರೆದುಕೊಳ್ಳುತ್ತೇನೆ.
ಬಿಡು ಬಿಡು,
ಒಲವಿಗೆಂತಹ ಲೆಕ್ಕಾಚಾರ?
ಕೊಟ್ಟಷ್ಟೂ ಕೊಂಡುಕೊಂಡೆವು
ತೆರೆದಷ್ಟೂ ಕಂಡುಕೊಂಡೆವು.
~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
#poetry
#poetrycommunity
#poetrylovers
#kannada
#news
#love
#love status
#kiss

Пікірлер: 23
@vijayalaxmikateel1413
@vijayalaxmikateel1413 8 ай бұрын
ಕಡಲು ಸುಮ್ಮನೆ ಉಕ್ಕುವುದಿಲ್ಲ ಒಲವ ಹುಣ್ಣಿಮೆಯಿಲ್ಲದೆ.....ಆಹಾ...ಲೆಕ್ಕ ತಪ್ಪದ ಹೃದಯ ಒಪ್ಪುವ ಲೆಕ್ಕಾಚಾರದ ಕವಿತೆ....ಧ್ವನಿಪೂರ್ಣವಾಗಿದೆ ಕವಿತೆ....
@Ravindranayaksannakkibettu
@Ravindranayaksannakkibettu 6 ай бұрын
ನಿಮ್ಮ ಸೂಕ್ಷ್ಮ ಓದಿಗೆ ಕವಿತೆ ದಕ್ಕದಿರಲು ಹೇಗೆ ಸಾಧ್ಯ? ❤️
@sinchanama5954
@sinchanama5954 5 ай бұрын
ಬಹಳ ಚೆನ್ನಾಗಿದೆ, ನನ್ನಂತಹ ಕವನ ಬರೆಯುವ ಆಸಕ್ತಯುಳ್ಳವರಿಗೆ ಪ್ರೇರಣೆ ಈ ಸಾಲುಗಳು😊
@Ravindranayaksannakkibettu
@Ravindranayaksannakkibettu 5 ай бұрын
ಧನ್ಯವಾದ ❤️❤️❤️ ನೀವು ಈಗಾಗ್ಲೇ ಚಂದ ಬರಿತೀರಿ ಬಿಡಿ❤️
@mallikasnayak6318
@mallikasnayak6318 8 ай бұрын
ವ್ಹಾ...❤👌
@Vijayashree-A1324
@Vijayashree-A1324 8 ай бұрын
👌❤️
@bindu7247
@bindu7247 8 ай бұрын
❤❤❤
@vedasharma5412
@vedasharma5412 8 ай бұрын
ವಾಹ್..!! ಬಹಳ ಚಂದದ ಕವನ..❣️
@Ravindranayaksannakkibettu
@Ravindranayaksannakkibettu 6 ай бұрын
❤️❤️❤️
@sangama2499
@sangama2499 6 ай бұрын
ಒಲವಿಗೆಂತಹ ಲೆಕ್ಕಾಚಾರ...
@ravitirakannanavara4910
@ravitirakannanavara4910 8 ай бұрын
Super
@Lachamanna.1975
@Lachamanna.1975 8 ай бұрын
ಗುರುಗಳೇ ❤️
@Ravindranayaksannakkibettu
@Ravindranayaksannakkibettu 6 ай бұрын
ಥ್ಯಾಂಕ್ಯೂ❤️
@Vinutha2368
@Vinutha2368 8 ай бұрын
ಸುಂದರ ಕವಿತೆ ಸರ್❤️👌👌👌👌 ನಿಜ ಒಲವಿಗಿಲ್ಲ ಲೆಕ್ಕಾಚಾರ.❤️ ಕವಿತೆಯನ್ನು ನಿಮ್ಮ ದ್ವನಿಯಲ್ಲಿ ಸೊಗಸಾಗಿ ಮನಮುಟ್ಟುವಂತೆ ವಾಚಿಸಿದ್ದೀರಿ ಸರ್.👌👌ಅಭಿನಂದನೆಗಳು❤️🙏
@Ravindranayaksannakkibettu
@Ravindranayaksannakkibettu 6 ай бұрын
ಥ್ಯಾಂಕ್ಯೂ❤️❤️❤️
@nsubrayabhat6435
@nsubrayabhat6435 8 ай бұрын
ಅಪೂರ್ವ ಭಾವ ಬಂಧ
@Ravindranayaksannakkibettu
@Ravindranayaksannakkibettu 6 ай бұрын
ಧನ್ಯವಾದ❤️
@LearnWithDP.
@LearnWithDP. 6 ай бұрын
ನಿಮ್ಮ ಈ ಒಲವಿನ ಲೆಕ್ಕಾಚಾರಕ್ಕೆ ಹಾಕಬೇಕು ,ನಾವು ತೆರಿಗೆ ಇಲ್ಲದಿದ್ದರೆ ಆಗುವುದು ಈ ಕವಿತೆ ದುಬಾರಿ❤
@Ravindranayaksannakkibettu
@Ravindranayaksannakkibettu 6 ай бұрын
ನಿಮ್ಮ ಪ್ರತಿಕ್ರಿಯೆಯೇ ಒಂದು ಲೆಕ್ಕಾಚಾರ😀
@LearnWithDP.
@LearnWithDP. 6 ай бұрын
ನಿಮ್ಮ ಪದಗಳೇ ಹಾಗೆ...
@gururajasr6207
@gururajasr6207 8 ай бұрын
ಸೊಗಸಾಗಿದೆ ರವೀಂದ್ರ ಸರ್ 👌👌
@nalinibc1392
@nalinibc1392 5 ай бұрын
ಆಹಾ.....
@Ravindranayaksannakkibettu
@Ravindranayaksannakkibettu 5 ай бұрын
ಥ್ಯಾಂಕ್ಯೂ❤️❤️❤️
Why Is He Unhappy…?
00:26
Alan Chikin Chow
Рет қаралды 108 МЛН
Get 10 Mega Boxes OR 60 Starr Drops!!
01:39
Brawl Stars
Рет қаралды 16 МЛН
Bony Just Wants To Take A Shower #animation
00:10
GREEN MAX
Рет қаралды 7 МЛН
Zombie Boy Saved My Life 💚
00:29
Alan Chikin Chow
Рет қаралды 6 МЛН
ತುಳಿಯುವವರ ಮಧ್ಯೆ ಬೆಳೆಯುವುದು ಹೇಗೆ?
20:53
Gangavathi Pranesh latest jokes with Moral story || ಪ್ರಾಣೇಶ್ ರವರ ನೀತಿ ಹಾಸ್ಯ || Pranesh Jokes
27:13
PRANESH PARYATANE ಪ್ರಾಣೇಶ್ ಪರ್ಯಟನೆ
Рет қаралды 3,1 МЛН
Why Is He Unhappy…?
00:26
Alan Chikin Chow
Рет қаралды 108 МЛН